Showing posts with label ಇದೇ ಜ್ಞಾನವೊ ಇದೇ ಮಾನವೊ mahipati. Show all posts
Showing posts with label ಇದೇ ಜ್ಞಾನವೊ ಇದೇ ಮಾನವೊ mahipati. Show all posts

Wednesday, 1 September 2021

ಇದೇ ಜ್ಞಾನವೊ ಇದೇ ಮಾನವೊ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ಜ್ಞಾನವೊ ಇದೇ ಮಾನವೊ P 
ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 
ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 
ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
***