Showing posts with label ವಂದಿಸಿದವರೆ ಧನ್ಯರು ನಮ್ಮ ಇಂದಿರಾಪತಿ purandara vittala. Show all posts
Showing posts with label ವಂದಿಸಿದವರೆ ಧನ್ಯರು ನಮ್ಮ ಇಂದಿರಾಪತಿ purandara vittala. Show all posts

Friday 6 December 2019

ವಂದಿಸಿದವರೆ ಧನ್ಯರು ನಮ್ಮ ಇಂದಿರಾಪತಿ purandara vittala

ಶ್ರೀ ಪುರಂದರದಾಸರ ಕೃತಿ 
ರಾಗ ರೇಗುಪ್ತಿ ಅಟತಾಳ 

ವಂದಿಸಿದವರೆ ಧನ್ಯರು ||ಪ||

ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ||

ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ
ಒಂದೊಂದು ನಾಮವ ನೆನೆಯುತ್ತ
ಮಂದರೋದ್ಧರನ ನೀ ಕುಂದದೆ ಪೂಜಿಸಿ
ವಂದಿಸುವ ಆನಂದದಿಂದ ||

ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತ
ವಿಟ್ಠಲ ವಿಟ್ಠಲ ಎನ್ನುತ ಮನ-
ಮುಟ್ಟಿ ಮಾಡುವ ಭಕ್ತಿಸ್ತುತಿಯಿಂದ
ಅಷ್ಟಾಂಗದಲಿ ವಂದನೆಯ ಮಾಡುತ ||

ಸಿರಿಲಕ್ಷ್ಮೀಪತಿ ಶರಣಾಗತರನ್ನು
ಕರುಣಿಸೆಂದು ಕರಮುಗಿದು
ಹರುಷಪುಳಕದಿಂದ ಮರೆತು ದೇಹವ
ಪುರಂದರವಿಠಲರಾಯನ ದೇಹಕ್ಕೆ ||'
***

pallavi

vandisuvare danyaru

anupallavi

namma indirApati gaTTa pILutalomme

caraNam 1

ondondu stOtradi ondondu mantradi ondondu nAmava nenevutta
mandarOddharana nI kundade pUjisi vandisuva Anandadinda

caraNam 2

biTTu lajjeya drSTisi nODuta viTTala viTTala ennuta mana muTTi
mADuva bhakti stutiyinda aSTAngadali vandaneya mADuta

caraNam 3

siri lakSmIpati sharaNAgataranu karuNisendu kara mugidu
haruSa puLakadinda maredu dEhava purandara viTTalarAyana dEhakke
***


 ರಾಗ ಖರಹರಪ್ರಿಯ           ಆದಿತಾಳ 

ವಂದಿಸಿದವರೆ ಧನ್ಯರು , ನಮ್ಮ ।
ಇಂದಿರಾಪತಿಗೆ ಅಡ್ಡ ಬೀಳುತಲೊಮ್ಮೆ ॥ ಪ ॥

ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ ।
ಒಂದೊಂದು ನಾಮವ ನೆನೆವುತ್ತ ॥
ಮಂದರೋದ್ಧರನ ನೀ ಕುಂದದೆ ಪೂಜಿಸಿ ।
ವಂದಿಸುವ ಆನಂದದಿಂದ ॥ 1 ॥

ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತ ।
ವಿಟ್ಠಲ ವಿಟ್ಠಲ ಎನುತ ಮನ - ॥
ಮುಟ್ಟಿ ಮಾಡುತ ಭಕ್ತಿ ಸ್ತುತಿಯಿಂದ ।
ಅಷ್ಟಾಂಗದಲಿ ವಂದನೆಯ ಮಾಡುತ ॥ 2 ॥

ಸಿರಿಲಕ್ಷ್ಮೀಪತಿ ಶರಣಾಗತರನು ।
ಕರುಣಿಸೆಂದೆನುತ ಕರವ ಮುಗಿದು ॥
ಹರುಷ ಪುಳಕದಿಂದ ಮರೆತು ದೇಹವ । 
ಪುರಂದರವಿಠ್ಠಲರಾಯನ ಚರಣಕೆ ॥ 3 ॥
***


ವಂದಿಸಿದವರೆ ಧನ್ಯರು - ನಮ್ಮ - |ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.

ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |ಒಂದೊಂದು ನಾಮವ ನೆನೆಯುತಲಿ ||ಮಂದರೋದ್ಧರನನು ಕುಂದದೆ ಪೂಜಿಸಿ |ವಂದಿಸುವಾನಂದದಿಂದ 1

ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |ವಿಟ್ಠಲ ವಿಟ್ಠಲ ಎನುತ ಮನ - ||ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ |ಅಷ್ಟಾಂಗದಲಿ ವಂದನೆಯ ಮಾಡುತಲಿ 2

ಸಿರಿಲಕ್ಷ್ಮೀಪತಿ ಶರಣಾಗತರನು |ಕರುಣಿಸೆಂದೆನುತಕರವ ಮುಗಿದು ||ಹರುಷ ಪುಳಕದಿಂದ ಹೊರತ ದೇಹವನು ಶ್ರೀ - |ಪುರಂದರವಿಠಲರಾಯನ ಚರಣಕೆ 3
**********