..
ನಿತ್ಯ ಬಿಡದೆ ಭಜಿಸೋ | ಕೋಸಿಗಿ
ಮುತ್ಯನ ಕೃಪೆ ಗಳಿಸೋ
ಸತ್ಯವಾಗಿ ಭವ ಕತ್ತಲೆ ಓಡಿಸಿ
ಉತ್ತಮಗತಿಯನು | ಇತ್ತು ಪಾಲಿಸುವ ಪ
ಯಾತಕೆ ಅನುಮಾನ | ಈತನೆ
ಜಾತರೂಪಶಯನ |
ಜಾತದಾತಯತಿ | ನಾಥ ಶ್ರೀರಾಯರ
ಪ್ರೀತಿಪಡೆದ ಪಿತ | ಭ್ರಾತಾರ್ಯರು ನಿಜ 1
ಪುನಃ ಜಗದಿ ಜನಿಸಿ | ಗಣಪತಿ
ಅನುಚರ ನಾಮವ ಧರಿಸಿ
ಅಖಿಲ ನಿಗಮದೋಳ್ | ಮಿನುಗುವ ಹರಿಗುಣ
ಮಣಿ ಬೆಳಕನು ಗುಣ ಜನಕೆ ತೋರಿದನು 2
ಮಂದಾಜಾತಶಯನ | ಶಾಮಸುಂದರ ವಿಠಲನ
ಪೊಂದಿದ ಮಾನವಿ ಮಂದಿರ ನೊಲಿಸುತ
ಮಂದಜನರ ದಯದಿಂದ ಸಲಹುವರು 3
***