Showing posts with label ನಂಬು ನಂಬೆಲೊ ಮನುಜಾ prasannavenkata. Show all posts
Showing posts with label ನಂಬು ನಂಬೆಲೊ ಮನುಜಾ prasannavenkata. Show all posts

Tuesday, 12 November 2019

ನಂಬು ನಂಬೆಲೊ ಮನುಜಾ ankita prasannavenkata

ರಾಗ - :  ತಾಳ -

ನಂಬು ನಂಬೆಲೊ ಮನುಜಾ ಹರಿಚರ
ಣಾಂಬುಜಯುಗಳ ಸಹಜ
ನಂಬಿದರೊಲಿವ ದಯಾಂಬುಧಿ ನಿಶ್ಚಯ ll ಪ ll

ತಂದೆಯ ನುಡಿಗೇಳದೆ ತನ್ನ ಕೊಲ್ಲ
ಬಂದ ದುರಿತಕಂಜದೆ 
ಇಂದಿರೇಶನೆ ಗತಿಯೆಂದೇಕ ನಿಷ್ಠೆಯ
ಹೊಂದಿದಸುರಜಗೆ ಬಂದ ನೃಹರಿಯ ll 1 ll

ಅಣ್ಣನಿಲ್ಲದೆ ರಾಜ್ಯವನೊಲ್ಲೆನೆಂ
ದುಣ್ಣದೆ ಭರತನಿರೆ
ಚಿನ್ಮಯ ಹನುಮನ ಮುಂದಟ್ಟಿ ಬಂದ ರಾ
ಮೆನ್ನಿಸಿ ಭರತಗೆ ತನ್ನಿತ್ತ ರಾಮನ ll 2 ll

ದ್ರೌಪದಿಯಳ ವಸನವ ಸಭೆಯೊಳು
ಪಾಪಿ ತಾ ಸೆಳೆಯುತಿರೆ
ಶ್ರೀ ಪ್ರಸನ್ವೆಂಕಟ ಭೂಪತಿ ಸಲಹೆನ್ನೆ
ಆಪತ್ತಿಗಾದ ಯದುಪತಿ ಕೃಷ್ಣನ್ನ ll 3 ll
***

by ಪ್ರಸನ್ನವೆಂಕಟದಾಸರು
ನಂಬು ನಂಬೆಲೊ ಮನುಜಾ ಹರಿಚರಣಾಂಬುಜಯುಗಳ ಸಹಜನಂಬಿದರೊಲಿವ ದಯಾಂಬುಧಿ ನಿಶ್ಚಯ ಪ.

ತಂದೆಯ ನುಡಿಗೇಳದೆ ತನ್ನ ಕೊಲ್ಲಬಂದ ದುರಿತಕಂಜದೆಇಂದಿರೇಶನೆ ಗತಿಯೆಂದೇಕ ನಿಷ್ಠೆಯಹೊಂದಿದಸುರಜಗೆ ಬಂದ ನೃಹರಿಯ 1

ಅಣ್ಣನಿಲ್ಲದೆ ರಾಜ್ಯವನೊಲ್ಲೆನೆಂದುಣ್ಣದೆ ಭರತನಿರೆಚಿನ್ಮಯ ಹನುಮನ ಮುಂದಟ್ಟಿ ಬಂದ ರಾಮೆನ್ನಿಸಿ ಭರತಗೆ ತನ್ನಿತ್ತ ರಾಮನ 2

ದ್ರೌಪದಿಯಳ ವಸನವ ಸಭೆಯೊಳುಪಾಪಿ ತಾ ಸೆಳೆಯುತಿರೆಶ್ರೀ ಪ್ರಸನ್ವೆಂಕಟ ಭೂಪತಿ ಸಲಹೆನ್ನೆಆಪತ್ತಿಗಾದ ಯದುಪತಿ ಕೃಷ್ಣನ್ನ 3
*******