ಪುರಂದರದಾಸರು
ರಾಗ - : ತಾಳ -
ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ l
ನಂಬಲಾರದೆ ಕೆಟ್ಟರು ll ಪ ll
ಅಂಬುಜನಾಭನ ಪಾದವ ನೆನೆದರೆ l
ಇಂಬುಗೊಡದ ದುಃಖ ಹರಿಸುವ ಶ್ರೀಕೃಷ್ಣ ll ಅ ಪ ll
ಬಲಿಯಪಾತಾಳಕಿಳುಹಿ - ಭಕ್ತನ ಬಾ - l
ಗಿಲವ ಕಾಯುವೆ ನಾನೆಂದ ll
ಛಲದೊಳು ಅಸುರರ ಶಿರಗಳ ತರಿದು ತಾ l
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ ll 1 ll
ತರಳ ಪ್ರಹ್ಲಾದಗೊಲಿದು - ಹಿರಣ್ಯಕನ ಉ - l
ಗುರಿನಿಂದಲೆ ಸೀಳಿದ ll
ಕರಿರಾಜಗೊಲಿದು ನೆಗಳು ನುಂಗುತಿರಲಾಗ l
ಪರಿಹರಿಸಿದ ಜಲದೊಳು ಪೊಕ್ಕು ಶ್ರೀಕೃಷ್ಣ ll 2 ll
ಪಾಂಡವರಿಗೆ ಒಲಿದು - ಕೌರವರನು l
ತುಂಡು ಛಿದ್ರಮಾಡಿದೆ ll
ಗಂಡರೈವರ ಮುಂದೆ ದ್ರೌಪದಿ ಕೂಗಲು l
ಕಂಡು ಕರುಣದಿ ಕಾಯ್ದ ಪುರಂದರವಿಟ್ಠಲನ ll 3 ll
***
ಅಂಬುಜನಾಭನ ಪಾದವ ನೆನೆದರೆ |ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ ಅಪಬಲಿಯ ಪಾತಾಳಕಿಳುಹಿ - ಭಕ್ತನ ಬಾ - |ಗಿಲವ ಕಾಲುವೆ ನಾನೆಂದ ||ಛಲದೊಳು ಅಸುರರ ಶಿರಗಳ ತರಿದು ತಾ |ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ 1
ತರಳ ಪ್ರಹ್ಮಾದಗೊಲಿದು - ಹಿರಣ್ಯಕನ ಉ - |ಗುರಿನಿಂದಲೆ ಸೀಳಿದ |ಕರಿರಾಜಗೊಲಿದುನೆಗಳು ನುಂಗುತಿರಲಾಗ ||ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ 2
ಪಾಂಡವರಿಗೆ ಒಲಿದು - ಕೌರವರನು |ತುಂಡು ಛಿದ್ರಮಾಡಿದೆ ||ಗಂಡರೈವರ ಮುಂದೆ ದ್ರೌಪದಿ ಕೂಗಲು |ಕಂಡು ಕರುಣದಿ ಕಾಯ್ದ ಪುರಂದರವಿಠಲನ 3
*******