ಗುರುಹಿರಿಯರನನುಸರಿಸಿ ಹರಿಯ ಮನದೊಳಗಿರಿಸಿ
ಪರಗತಿಯ ಬೇಗ ಸಾಧಿಸಿರೊ ||ಪ||
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆ
ಸಿಕ್ಕಿ ಬಹುಕಾಲ ಬಳಲದಿರಿ
ರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ
ಸೆರೆಯಿಕ್ಕದಂತವನ ಮರೆಹೋಗಿರೊ ||೧||
ಕಂಬಳಿಯ ಬುತ್ತಿಯಂತೀ ದೇಹದೊಳಗೆ
ಸುಖವೆಂಬುದಿಲ್ಲವು ದುಃಖಭರಿತ
ಅಂಬುಜಾಕ್ಷನ ದಿವ್ಯ ಮಂಗಳ
ಕಥಾಮೃತವನುಂಬ ಸಂಭ್ರಮಕ್ಕೆ ಸರಿಗಾಣೆನು ||೨||
ಮಕ್ಕಳುಗಳಳುವಾಗ ಮಡದಿಯರು ಜರಿವಾಗ
ಭಿಕ್ಷುಕರು ಬಂದು ಬೈದ್ಹೋಗುವಾಗ
ಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆ
ಸೌಖ್ಯವೆತ್ತಣದು ಮನುಜರಿಗೆ ||೩||
ತಾಯ ಮಾರಿ ತೊತ್ತ ಕೊಂಬ ಪಾಮರನಂತೆ
ಹೇಯ ಕುಜನರ ಚರಣಕೆರಗಿ
ಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆ
ಆಯುಷ್ಯ ಬರಿದೆ ಹೋಯಿತಲ್ಲ ||೪||
ಐವರಿತ್ತೊಡವೆಯನು ಅವರವರು ಒಯ್ವರು
ಮತ್ತೈವರೆಂಬುವರು ತೊಲಗುವರು
ಮೈಯ ಹತ್ತರ ಕೂಟ ಹರಿದುಹೋಗುವ ಮುನ್ನ
ಕೈಯ ಪಿಡಿದೆತ್ತುವರ ಕಾಣೆ ||೫||
ಕಾಲು ಜವೆಗುಂದಿದವು ರೋಗರುಜಿನಗಳಿಂದ
ಕಾಲನ ಭಟರು ಬಂದು ಕವಿದು
ಸಾಲಾಗಿ ನಿಂತಾಗ ಮುಖ ಘಂಟೆಯೊಳಗಿನ
ನಾಲಿಗೆಗೆ ನಾದವೆಲ್ಲಿಹುದೊ ||೬||
ಈಗಲೆ ಹರಿನಾಮ ನಾದದಿಂದೆಚ್ಚೆತ್ತು
ನಾಗಶಯನನ ಪುರದ ಪಥವ
ಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವು
ಈ ಗಾಳಿದೀಪ ಸ್ಥಿರವಲ್ಲ ||೭||
ಜರೆ ಬಂದು ಕಡೆಯಲ್ಲಿ ಗುರುಗುರುಗುಟ್ಟುವಾಗ
ಶರೀರಸಂಬಂಧಿಗಳ ಕಾಟ
ತರುಣಿಯರಮೇಲಾಸೆ ತಮ್ಮ ಹಿತವರಿಯದೆ
ಬರಿದೆ ಭವದೊಳಗೆ ಬಳಲದಿರಿ ||೮||
ವೇದಶಾಸ್ತ್ರವನೋದಲಿಲ್ಲ ಜಪತಪ
ಸಾಧು ಸತ್ಕರ್ಮಗಳ ಸರಕಿಲ್ಲ
ಮಾಧವನ ಪೂಜೆಯನು ಮಾಡಿದವನಲ್ಲ
ಹರಿಪಾದತೀರ್ಥ ವ್ರತಗಳಿಲ್ಲ ||೯||
ಊರ್ಧ್ವಪುಂಡ್ರಗಳೆಲ್ಲಿ ಹರಿಯ ಲಾಂಛನವೆಲ್ಲಿ
ಪದ್ಮಾಕ್ಷಿ ಶ್ರೀತುಲಸಿಸರಗಳೆಲ್ಲಿ
ಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳು
ಬಿದ್ದು ಹೊರಳುವ ಮನುಜರೆಲ್ಲಿ ||೧೦||
ಏಕಾದಶಿಯ ಮಾಡಿ ಯತಿಗಳೊಡನೆ ಆಡಿ
ಪೋಕವೃತ್ತಿಗಳನೀಡಾಡಿ
ಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿ
ಆ ಕೃಷ್ಣನಂಘ್ರಿಗಳ ಪಾಡಿ ||೧೧||
ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿ
ಶುಷ್ಕ ತರ್ಕಗಳ ಮೇಲೆ ಉಗುಳಿ
ಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿ
ಮುಕ್ತಿಮಾರ್ಗದಲಿ ಇನ್ನು ತೆರಳಿ ||೧೨||
ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನ
ಕಳ್ಳರೈವರ ಕಾಟದಿಂದ
ಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನ
ಫುಲ್ಲನಾಭನಲಿ ಬಚ್ಚಿಡಿರೊ ||೧೩||
ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿ
ಎಲುವಿನ ಬಲದಲ್ಲಿ ಗೂಡಮಾಡಿ
ಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟು
ಜಲಜನಾಭನ ಸೇರಿಕೊಳ್ಳಿರೊ ||೧೪||
ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿ
ತುಂಬಿದ ವಾಯು ಸ್ಥಿರವೆಂದು ನಂಬಿಕೊಂಡಿರಬೇಡಿ
ಹಯವದನ ಹರಿಯ
ಪಾದಾಂಬುಜವ ಸೇರಿ ಬದುಕಿರೊ ||೧೫||
***
Guruhiriyarananusarisi hariya manadolagirisi
paragatiya bega sadhisiro ||pa||
Lekkavillada dehavemba seremaneyolage
sikki bahukala balaladiri
rakkasariya bhaktarolu seri munde
sereyikkadantavana marehogiro ||1||
Kambaliya buttiyanti dehadolage
sukhavembudillavu duhkhabharita
ambujakshana divya mangala
kathamrutavanumba sambhramakke sariganenu ||2||
Makkalugalaluvaga madadiyaru jarivaga
bhikshukaru bandu baidhoguvaga
ikki porevudake bageyillada daridrange
saukhyavettanadu manujarige ||3||
Taya mari totta komba pamaranante
heya kujanara charanakeragi
sriyarasananghrigala neneyalollada manujarige
ayushya baride hoyitalla ||4||
Aivarittodaveyanu avaravaru oyvaru
mattaivarembuvaru tolaguvaru
maiya hattara kuta hariduhoguva munna
kaiya pididettuvara kane ||5||
Kalu javegundidavu rogarujinagalinda
kalana bhataru bandu kavidu
salagi nintaga mukha ghanteyolagina
naligege nadavellihudo ||6||
Igale harinama nadadindechchettu
nagashayanana purada pathava
agamajnara kaiya kelikolliro nivu
i galidipa sthiravalla ||7||
Jare bandu kadeyalli guruguruguttuvaga
sharirasambandhigala kata
taruniyaramelase tamma hitavariyade
baride bhavadolage balaladiri ||8||
Vedashastravanodalilla japatapa
sadhu satkarmagala sarakilla
madhavana pujeyanu madidavanalla
haripadatirtha vratagalilla ||9||
Urdhvapundragalelli hariya lanchanavelli
padmakshi sritulasisaragalelli
saddharmapathavelli vishayandhakupadolu
biddu horaluva manujarelli ||10||
Ekadashiya madi yatigalodane adi
pokavruttigalanidadi
srikantananu bedi sukrutigalane kudi
a krishnananghrigala padi ||11||
Ukki hariyane pogali avananganadi horali
shushka tarkagala mele uguli
bhaktijnanagalirali mikka pathadim marali
muktimargadalinnu terali ||12||
Kollenayaka bandu kotegadarada munna
kallaraivara katadinda
ulla punyarthagalu kolke hogada munna
phullanabhanali bachchidiro ||13||
Malamutraraktamansada rasigalu kudi
eluvina baladalli gudamadi
belesidi tanuvemba narakadaseya bittu
jalajanabhana serikolliro ||14||
Ombattu chidravulla dehavemba madakeyalli
tumbida vayu sthiravendu nambikondirabedi
hayavadana hariya padambujava seri badukiro ||15||
***
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ.
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1
ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2
ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3
ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4
ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5
ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6
ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7
ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8
ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9
ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10
ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11
ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12
ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13
ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14
ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
***