Showing posts with label ವೆಂಕಟೇಶನೆ ಶ್ರೀ ವೆಂಕಟೇಶನೆ ಶಂಖ ಚಕ್ರಗಳನೆ sirigurutandevarada vittala. Show all posts
Showing posts with label ವೆಂಕಟೇಶನೆ ಶ್ರೀ ವೆಂಕಟೇಶನೆ ಶಂಖ ಚಕ್ರಗಳನೆ sirigurutandevarada vittala. Show all posts

Friday, 6 August 2021

ವೆಂಕಟೇಶನೆ ಶ್ರೀ ವೆಂಕಟೇಶನೆ ಶಂಖ ಚಕ್ರಗಳನೆ ankita sirigurutandevarada vittala

 ..


Kruti by ಸಿರಿಗುರುತಂದೆವರದವಿಠಲರು sirigurutandevarada vittala 


ವೆಂಕಟೇಶನೆ ಶ್ರೀ ವೆಂಕಟೇಶನೆ ಪ.


ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ.


ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ1


ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ 2


ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ3


ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ 4


ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ 5

****