..
Kruti by ಸಿರಿಗುರುತಂದೆವರದವಿಠಲರು sirigurutandevarada vittala
ರಾಗ - : ತಾಳ -
ವೆಂಕಟೇಶನೆ ಶ್ರೀ ವೆಂಕಟೇಶನೆ ll ಪ ll
ಶಂಖ ಚಕ್ರಗಳನೆ ಪಿಡಿದು
ಬಿಂಕದಿಂದ ಮೆರೆಯುತಿರುವ ll ಅ ಪ ll
ಮೀನನಾಗಿ ಬಂದು ಘೋರ ದಾನವನ ಕೊಂದು ಧರಣಿ
ಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ ll ೧ ll
ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನ ತರಿದು
ಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ ll ೨ ll
ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿ
ಛಲದಿ ಕ್ಷತ್ರಿಯನಳಿದ ಚೆಲುವ ಪರಶುರಾಮ ll ೩ ll
ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿ
ಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ ll ೪ ll
ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿ
ತುರಗವೇರಿ ಚರಿಪ ತಂದೆವರದವಿಟ್ಠಲ ಕಲ್ಕಿ ll ೫ ll
***
ವೆಂಕಟೇಶನೆ ಶ್ರೀ ವೆಂಕಟೇಶನೆ ಪ.
ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ.
ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ1
ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ 2
ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ3
ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ 4
ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ 5
****
No comments:
Post a Comment