ರಾಗ ಯದುಕುಲಕಾಂಭೋಜಿ. ಝಂಪೆ ತಾಳ
ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ
ಕಣ್ಣು ದೃಷ್ಟಿ ತಾಗಿತಯ್ಯ ||ಪ||
ಅನುದಿನ ನಮ್ಮೆಲ್ಲರ ಅಗಲಬಾರದು ಎಂದು
ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ||
ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು
ಬಸಿರೊಳಗೆ ಬಲಿತು ಕಲ್ಮಶ ನೆಲೆಸಿತೆ
ಪೊಸ ಜವ್ವನದ ನಾರಿಯರು ಮುದ್ದಿಸಲವರ ಅಧ-
ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ
ಹೊದ್ದಿ ಗೊಲ್ಲರ ಮನೆಯಲ್ಲಿದ್ದಷ್ಟು ಬೆಣ್ಣೆಯನು
ಕದ್ದು ಮೆದ್ದುದಕೆ ಹೊಟ್ಟೆ ತುಂಬಿತೆ
ಅಬ್ಧಿಯೊಳಗಿದ್ದಮೃತ ಅಸುರರಿಗೆ ವಂಚಿಸಿ
ಮೆದ್ದಿಸಲು ಸುರರಿಗೆ ಹಿತವಾಯಿತೆ ಕಂದ
ತುರುಗಾಯ್ವ ಗೊಲ್ಲರು ಕಲೆಸಿ ಅನ್ನವ ಕೊಡಲು
ಹರುಷದಿಂದುಂಬೋದತಿ ಪ್ರಿಯವಾಯಿತೆ
ಪರಮ ಭಕ್ತರು ನಿನ್ನ ಪೂಜಿಸುತ ಅರ್ಪಿಸಿದ
ಪರಿ ಪರಿಯ ನೈವೇದ್ಯ ಹಿತವಾಯಿತೆ ಕಂದ
ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು
ಬಣ್ಣಿಸುತ ನಾನುಣಿಸೆ ಒಲ್ಲದಾಯಿತೆ
ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ
ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವದೆ
ವರ ಮಹಾ ಋಷಿಗಳು ಯಾಚಿಸುತ ತಂದಿತ್ತ
ಪರಿಪರಿಯ ನೈವೇದ್ಯ ಪ್ರಿಯವಾಯಿತೆ
ವರ ಪುರಂದರ ವಿಟ್ಠಲರಾಯನೇ ನೀ ಪೇಳೊ
ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ
***
ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ
ಕಣ್ಣು ದೃಷ್ಟಿ ತಾಗಿತಯ್ಯ ||ಪ||
ಅನುದಿನ ನಮ್ಮೆಲ್ಲರ ಅಗಲಬಾರದು ಎಂದು
ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ||
ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು
ಬಸಿರೊಳಗೆ ಬಲಿತು ಕಲ್ಮಶ ನೆಲೆಸಿತೆ
ಪೊಸ ಜವ್ವನದ ನಾರಿಯರು ಮುದ್ದಿಸಲವರ ಅಧ-
ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ
ಹೊದ್ದಿ ಗೊಲ್ಲರ ಮನೆಯಲ್ಲಿದ್ದಷ್ಟು ಬೆಣ್ಣೆಯನು
ಕದ್ದು ಮೆದ್ದುದಕೆ ಹೊಟ್ಟೆ ತುಂಬಿತೆ
ಅಬ್ಧಿಯೊಳಗಿದ್ದಮೃತ ಅಸುರರಿಗೆ ವಂಚಿಸಿ
ಮೆದ್ದಿಸಲು ಸುರರಿಗೆ ಹಿತವಾಯಿತೆ ಕಂದ
ತುರುಗಾಯ್ವ ಗೊಲ್ಲರು ಕಲೆಸಿ ಅನ್ನವ ಕೊಡಲು
ಹರುಷದಿಂದುಂಬೋದತಿ ಪ್ರಿಯವಾಯಿತೆ
ಪರಮ ಭಕ್ತರು ನಿನ್ನ ಪೂಜಿಸುತ ಅರ್ಪಿಸಿದ
ಪರಿ ಪರಿಯ ನೈವೇದ್ಯ ಹಿತವಾಯಿತೆ ಕಂದ
ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು
ಬಣ್ಣಿಸುತ ನಾನುಣಿಸೆ ಒಲ್ಲದಾಯಿತೆ
ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ
ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವದೆ
ವರ ಮಹಾ ಋಷಿಗಳು ಯಾಚಿಸುತ ತಂದಿತ್ತ
ಪರಿಪರಿಯ ನೈವೇದ್ಯ ಪ್ರಿಯವಾಯಿತೆ
ವರ ಪುರಂದರ ವಿಟ್ಠಲರಾಯನೇ ನೀ ಪೇಳೊ
ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ
***
pallavi
uNalolle yAkO kanda Ava gOvaLatiyara kaNNu drSTi tAgitayya
anupallavi
anudina nammellara akhala bAradendu manasOtu gOpiyaru mecci maddikkidare
caraNam 1
asure pUtaniyitta viSada moLegaLanuNDu basiroLage balidu kalmaSa nelaside
posa javvanada nAriyaru muddisalavara atha rasuthe ninage hasive mANisite kanda
caraNam 2
hoddi gollara maneyalliddaSTu beNNeyanu kaddu meddudake hoTTe tumbide
abdhiyoLagiddamrta asurarige vancisi meddisalu surarige hitavAyite kanda
caraNam 3
durugAiva gollaru kalasi annava koDalu haruSadindumbudati priyavAyite
parama bhaktaruninna pUjisuta arpisida pari pariya naivEdya hitavAyite kanda
caraNam 4
saNNakki yOgaravu sogasAda kene mosaru baNNisuta nAnuNise olladAite
ciNNa ninnanu tamma toDeya mEletti koNDA heNNugaLu uNisidare hoTTe tumbuvade
caraNam 5
vara mahA rSigaLu yAcisuta tanditta paripariya naivEdya priyavAyite
vara purandara viTTalarAyanE nI pELo nirata santuSTanembudu nijavAyitE kanda
***