Showing posts with label ನಿತ್ಯ ಕಲ್ಯಾಣಿಗೆ ಶರಣು ಶರಣು ಲೋಕ ಜನನಿಗೆ vijaya vittala. Show all posts
Showing posts with label ನಿತ್ಯ ಕಲ್ಯಾಣಿಗೆ ಶರಣು ಶರಣು ಲೋಕ ಜನನಿಗೆ vijaya vittala. Show all posts

Wednesday 16 October 2019

ನಿತ್ಯ ಕಲ್ಯಾಣಿಗೆ ಶರಣು ಶರಣು ಲೋಕ ಜನನಿಗೆ ankita vijaya vittala

ವಿಜಯದಾಸ
ನಿತ್ಯ ಕಲ್ಯಾಣಿಗೆ |
ಶರಣು ಶರಣು ಲೋಕ ಜನನಿಗೆ | ಶರಣು ಮುಂದಣ ವಾಣಿಗೆ ಪ

ಶ್ರದ್ಧೆ ಭಾರತಿ ಭಾಗ್ಯ ಸಂಪನ್ನೆ |
ಪದ್ಮ ಮಂದಿರ ನಂದನೆ |
ಭದ್ರ ಫಲದಾಯಕಳೆ ಕರುಣಾಬ್ಧಿಯೇ ಭಕ್ತರಪ್ರಿಯೇ 1

ಖಗಪನ್ನಗ ನಗಮಗಳ ಪತಿಯಿಂದ ಮಿಗಿಲೆನಿಪೆ ಶತಗುಣದಲಿ |
ಮೃಗನಾಭಿ ನೊಸಲಲ್ಲಿ ಶೋಭಿಸೆ |
ಮೃಗಕುರುಹ ಸಿರಿಮೊಗದವಳೆ2

ವಿಪ್ರ ಕನ್ನಿಕೆ | ಚಂದ್ರದಿ ಸ್ಥಾನವಾಸಳೆ |
ಸಿರಿ ವಿಜಯವಿಠ್ಠಲನ |ವಂದಿಸುವ ದ್ರೌಪದಿದೇವಿ 3
********