ಶ್ರೀವಿಜಯೀಂದ್ರತೀರ್ಥಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
ರಾಗ ಪಂತುವರಾಳಿ
ಧ್ರುವತಾಳ
ಯಾಕೆಲ ಮನವೇ ನೀ ಯೆನ್ನ
ಕೀಕಟ ದೇಶಕ್ಕೆ ಶಳದು ಇಂದು
ಲೋಕೈಕನಾಥ ಹರಿಯ ಪಾದಕೆನ್ನನು
ದೂರನ ಮಾಡಿ ಇಂದು ಮಾಯಕ್ಯೆಲ ಜಿಹ್ವೆ
ಲೋಕ ವಾರ್ತಿಗಳ ಸೇವಿಪದು
ಶ್ರೀಕಾಂತನ ವಾರುತಿ ನುಡಿಸಿದಂತೆ ಮಾಡಿದಯ್ಯಾ
ಯಾಕೆಲ ಕಿವಿಯೆ ಪೋಕರ ಆಲಾಪಗಳ ಕೇಳಿ ಕೆಡದೀ
ಯಾಕೆಲ ಕಣ್ಣೆ ಪರವಧುಗಳ ಆ -
ಲೋಕಿಸಿ ಎನ್ನನು ಬಯಸಿದಿ
ಸಾಕು ಸಾಕು ನಿಮ್ಮ ಸಂಗತಿ
ಎಂಬಂತೆ ನೀ ಮಾಡಿದಿ
ಕಾಕು ಮಾಡದೆನ್ನ ಸಿರಿ ವಿಜಯೀಂದ್ರರಾಮನ್ನ ಆಗಲಿಸಿದಿರಿ ॥ 1 ॥
ಮಟ್ಟತಾಳ
ಹರಿಚಿಂತನ ನಾಮ ಮೂರುತಿ ಕೀರುತಿಗಳ
ವಿರಚಿಸಿ ಸವಿಯದ ನೋಡದ ಕೇಳದ
ಕರಣಗಳಿದ್ದೆಡೆ ಇಲ್ಲದಿದ್ದಡೇನೊ
ಹರಿಗೆ ಸನ್ಮುಖವಾಗದ ಕಾರಣ
ಕರಣಂಗಳ ಶಿರವಳಿವದೊಳಿತೊ
ಸಿರಿ ವಿಜಯೀಂದ್ರರಾಮ ನಲ್ಲದನ್ಯ ವಿಷಯ -
ಕ್ಕೆರಗುವ ಕರಣಂಗಳ ಶಿರವರಿವದ್ದೊಳಿತೊ ॥ 2 ॥
ರೂಪಕತಾಳ
ಮನುಮಥನಯ್ಯನಕಿಂತ ಕಡು ಚಲ್ವನಾವನೊ
ವನಜಭವನ ತಂದೆಕಿಂತ ದೇವರೊಳದಾವನೊ
ಮುನಿಮನಕೆ ಗೋಚರನಾಗಿ ತೋರಿ ತೋರನು ದಾವನೊ
ಘನ ವಿಜಯೀಂದ್ರರಾಮ ಪೊರೆಯಲೆಮ್ಮನುದಿನ ॥ 3 ॥
ಝಂಪೆತಾಳ
ನಿನ್ನ ಕೀರುತಿ ಕಿವಿಗೆ ನಾಮ ಎನ್ನ ನಾಲಿಗೆ
ಎನ್ನ ಕಣ್ಣಿಗೆ ನಿನ್ನ ಮೂರ್ತಿ ದೊರೆಯಲೊ
ಎನ್ನ ಮನಕೆ ನೆನೆವ ಸಿರಿ ವಿಜಯೀಂದ್ರರಾಮ
ಎನ್ನ ಕಣ್ಣಿಗೆ ನೀ ನಿನ್ನ ಮೂರ್ತಿ ದೊರೆಯಲೊ ॥ 4 ॥
ತ್ರಿವಿಡಿತಾಳ
ಮೂರೇಳು ಕರಣಂಗಳಿರೇ ನೀವು ಸಿರಿಪತಿಗೆ
ದೂರರಾಗಿ ನರಕಯಾತನೆ ಗೈದದೆ
ಹರುಷಗುಂದಲಿ ಲೇಸಾದೆ
ಸುರೇಶ ಮೊದಲಾಗಿ ಅರ್ಚಿಪ
ಪರಮಪಾವನಾ ಚರಣ ಶ್ರೀಗರುವದೇವರ ದೇವನ
ಸಿರಿ ವಿಜಯೀಂದ್ರರಾಮ ಪೊರೆಯಲೆಮ್ಮನುದಿನ ॥ 5 ॥
ಅಟ್ಟತಾಳ
ತಪ್ಪನೊಪ್ಪನರಸನು ತನ್ನ ನೆರೆನಂಬಿದ
ಶ್ರೀಪತಿ ಅಜಮಿಳ ಸುರಪತಿ ಮುಖರ
ತಪ್ಪು ಮಾಡಿದವರ ತಪ್ಪು ಹಿಡಿದನೆ ಎ -
ನ್ನಪ್ಪ ಶ್ರೀವಿಜಯೀಂದ್ರರಾಮ ದಯಾನಿಧೆ ॥ 6 ॥
ಆದಿತಾಳ
ನಾರಾಯಣನೆಂದು ಮಗನ ಕರಿಯಲಾಗ
ಆರತನಾಗಿ ಆವಾತ ಕರೆದನೆಂದು ಆ -
ದರದಿಂದಲಿ ಕೇಳಿ ಅಜಾಮಿಳನ
ಭೂರಿ ಭೀತಿಗಳು ಕ್ಷಣದಿ ಬಿಡಿಸನೆ
ಸಾರ ಹೃದಯನೆಂದರಿದರೆ ಬಿಡುವನೆ
ಮಾರಮಣ ಸಿರಿ ವಿಜಯೀಂದ್ರರಾಮ ॥ 7 ॥
ಜತೆ
ಸಾಧುಗಳನ ಸಂತತ ಸಲಹುವ ಸು -
ಬೋಧ ಮೂರುತಿ ಸಿರಿ ವಿಜಯೀಂದ್ರರಾಮ ॥
****
ಶ್ರೀ ವಿಜಯೀಂದ್ರತೀರ್ಥಾರ್ಯ ವಿರಚಿತ ಸುಳಾದಿ
ರಾಗ ಶುಭಪಂತುವರಾಳಿ
ಧ್ರುವತಾಳ
ಯಾಕೆಲ ಮನವೇ ನೀ ಎನ್ನ
ಕೀಕಟ ದೇಶಕ್ಕೆ ಶಳದು ಇಂದು
ಲೋಕೈಕನಾಥ ಹರಿಯ ಪಾದಕೆನ್ನನು
ದೂರನ ಮಾಡಿ ಇಂದು ಮಾಯಕ್ಯೆಲ ಜಿಹ್ವೆ
ಲೋಕ ವಾರ್ತಿಗಳ ಸೇವಿಪದು
ಶ್ರೀಕಾಂತನ ವಾರುತಿ ನುಡಿಸಿದಂತೆ ಮಾಡಿದಯ್ಯಾ
ಯಾಕೆಲ ಕಿವಿಯೆ ಪೋಕರ ಆಲಾಪಗಳ ಕೇಳಿ ಕೆಡದೀ
ಯಾಕೆಲ ಕಣ್ಣೆ ಪರವಧುಗಳ ಆಲೋಕಿಸಿ ಎನ್ನನು ಬಯಸಿದಿ
ಸಾಕು ಸಾಕು ನಿಮ್ಮ ಸಂಗತಿ ಎಂಬಂತೆ ನೀ ಮಾಡಿದಿ
ಕಾಕು ಮಾಡದೆನ್ನ ಸಿರಿ ವಿಜಯೀಂದ್ರರಾಮನ್ನ ಆಗಲಿಸಿದಿರಿ ॥ 1 ॥
ಮಟ್ಟತಾಳ
ಹರಿಚಿಂತನ ನಾಮ ಮೂರುತಿ ಕೀರುತಿಗಳ
ವಿರಚಿಸಿ ಸವಿಯದ ನೋಡದ ಕೇಳದ
ಕರಣಗಳಿದ್ದೆಡೆ ಇಲ್ಲದಿದ್ದಡೇನೊ
ಹರಿಗೆ ಸನ್ಮುಖವಾಗದ ಕಾರಣ
ಕರಣಂಗಳ ಶಿರವಳಿವದೊಳಿತೊ
ಸಿರಿ ವಿಜಯೀಂದ್ರರಾಮನಲ್ಲದನ್ಯ ವಿಷಯ -
ಕ್ಕೆರಗುವ ಕರಣಂಗಳ ಶಿರವರಿವದ್ದೊಳಿತೊ ॥ 2 ॥
ರೂಪಕತಾಳ
ಮನುಮಥನಯ್ಯನಕಿಂತ ಕಡು ಚಲ್ವನಾವನೊ
ವನಜಭವನ ತಂದೆಕಿಂತ ದೇವರೊಳದಾವನೊ
ಮುನಿ ಮನಕೆ ಗೋಚರನಾಗಿ ತೋರಿ ತೋರನು ದಾವನೊ
ಘನ ವಿಜಯೀಂದ್ರರಾಮ ಪೊರೆಯಲೆಮ್ಮನುದಿನ ॥ 3 ॥
ಝಂಪತಾಳ
ನಿನ್ನ ಕೀರುತಿ ಕಿವಿಗೆ ನಾಮ ಎನ್ನ ನಾಲಿಗೆ
ಎನ್ನ ಕಣ್ಣಿಗೆ ನಿನ್ನ ಮೂರ್ತಿ ದೊರೆಯಲೊ
ಎನ್ನ ಮನಕೆ ನೆನೆವ ಸಿರಿ ವಿಜಯೀಂದ್ರರಾಮ
ಎನ್ನ ಕಣ್ಣಿಗೆ ನೀ ನಿನ್ನ ಮೂರ್ತಿ ದೊರೆಯಲೊ ॥ 4 ॥
ತ್ರಿವಿಡಿತಾಳ
ಮೂರೇಳು ಕರಣಂಗಳಿರೇ ನೀವು
ಸಿರಿಪತಿಗೆ ದೂರರಾಗಿ ನರಕಯಾತನೆ ಗೈದದೆ
ಹರುಷಗುಂದಲಿ ಲೇಸಾದೆ
ಸುರೇಶ ಮೊದಲಾಗಿ ಅರ್ಚಿಪ ಪರಮಪಾವನಾ ಚರಣ
ಶ್ರೀಗರುವದೇವರ ದೇವನ
ಸಿರಿ ವಿಜಯೀಂದ್ರರಾಮ ಪೊರೆಯಲೆಮ್ಮನುದಿನ ॥ 5 ॥
ಅಟ್ಟತಾಳ
ತಪ್ಪನೊಪ್ಪನರಸನು ತನ್ನ ನೆರೆನಂಬಿದ
ಶ್ರೀಪತಿ ಅಜಮಿಳ ಸುರಪತಿ ಮುಖರ
ತಪ್ಪು ಮಾಡಿದವರ ತಪ್ಪು ಹಿಡಿದನೆ ಎ -
ನ್ನಪ್ಪ ಶ್ರೀವಿಜಯೀಂದ್ರರಾಮ ದಯಾನಿಧೆ ॥ 6 ॥
ಆದಿತಾಳ
ನಾರಾಯಣನೆಂದು ಮಗನ ಕರಿಯಲಾಗ
ಆರತನಾಗಿ ಆವಾತ ಕರೆದನೆಂದು ಆ -
ದರದಿಂದಲಿ ಕೇಳಿ ಅಜಾಮಿಳನ
ಭೂರಿ ಭೀತಿಗಳು ಕ್ಷಣದಿ ಬಿಡಿಸನೆ
ಸಾರ ಹೃದಯನೆಂದರಿದರೆ ಬಿಡುವನೆ
ಮಾರಮಣ ಸಿರಿ ವಿಜಯೀಂದ್ರರಾಮ ॥ 7 ॥
ಜತೆ
ಸಾಧುಗಳನ ಸಂತತ ಸಲಹುವ ಸು -
ಬೋಧ ಮೂರುತಿ ಸಿರಿ ವಿಜಯೀಂದ್ರರಾಮ ॥
****