Showing posts with label ಹ್ಯಾಂಗೆ ನಿಮ್ಮ ಚರಣಾ ಕಾಂಬೆನೊಯೋಗಿ ಜನರ vyasa vittala. Show all posts
Showing posts with label ಹ್ಯಾಂಗೆ ನಿಮ್ಮ ಚರಣಾ ಕಾಂಬೆನೊಯೋಗಿ ಜನರ vyasa vittala. Show all posts

Friday, 27 December 2019

ಹ್ಯಾಂಗೆ ನಿಮ್ಮ ಚರಣಾ ಕಾಂಬೆನೊಯೋಗಿ ಜನರ ankita vyasa vittala

ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ

ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ.

ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1

ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2

ಸಾಕು ಭವದ ಸಂಗಾ | ಗರ್ಭದೊಳ್ಹಾಕದಿರೆಲೊ ರಂಗಾ ||ಶ್ರೀಕರ ಉತ್ತುಂಗ | ಕರುಣಿಸಬೇಕು ಕೃಪಾ ಪಾಂಗಾ ||ಧಿಕ್ಕರಿಸುವದಿನ್ಯಾಕೆ ಪೇಳುವೆ ಕರುಣಾಕರ ಎನ ವಾಕು ಪಾಲಿಸೊ ಹರೆ 3

ಎಲ್ಲಿ ನೋಡಲು ನಿನ್ನಾ | ಸರಿಇಲ್ಲ ಕೇಳು ಚೆನ್ನಾ ||ಫುಲ್ಲನಾಭನೆ ಎನ್ನಾ | ಕಾಯಿದುಎಲ್ಲಿ ನೋಡಲು ದಯ ಸಲ್ಲಿಸಿ ಎನ್ನಯಸೊಲ್ಲು ಲಾಲಿಪುದು ಮಲ್ಲಮರ್ದನ ಕೃಷ್ಣ 4

ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5
*********