Showing posts with label ರಾಮಚಂದ್ರಾಯ ಜನಕ ರಾಜಜಾ others. Show all posts
Showing posts with label ರಾಮಚಂದ್ರಾಯ ಜನಕ ರಾಜಜಾ others. Show all posts

Friday, 27 December 2019

ರಾಮಚಂದ್ರಾಯ ಜನಕ ರಾಜಜಾ others

by ಭದ್ರಾಚಲ ದಾಸರು
ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಲಂ ||
ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ
ವಾಸವಾದಿ ವಿನುತ ಸದ್ವರಾಯ ಮಂಗಲಂ ||
ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ
ಹಾರಕಟಕ ಶೋಭಿತಾಯ ಭೂರಿ ಮಂಗಲಂ||
ಲಲಿತರತ್ನ ಕುಂಡಲಾಯ ತುಲಸಿ ವನಮಾಲಾಯ
ಜಲಜ ಸದೃಶ ದೇಹಾಯ ಚಾರು ಮಂಗಲಂ ||
ದೇವಕಿ ಸುಪುತ್ರಾಯ ದೇವದೇವೋತ್ತಮಾಯ
ಭಾವಜ ಗುರುವರಾಯ ಭವ್ಯ ಮಂಗಲಂ ||
ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ
ಆಂಡಜ ವಾಹನಾಯ ಅತುಲ ಮಂಗಲಂ ||
ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ
ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಲಂ ||
ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವಮಂಗಲಂ ||
********