Showing posts with label ನೋಡಿದೇ ನಾ ನೋಡಿದೆ ನೋಡಿದೇ ನಾ ನೋಡಿದೆ gurujagannatha vittala vyasaraja stutih. Show all posts
Showing posts with label ನೋಡಿದೇ ನಾ ನೋಡಿದೆ ನೋಡಿದೇ ನಾ ನೋಡಿದೆ gurujagannatha vittala vyasaraja stutih. Show all posts

Monday, 12 April 2021

ನೋಡಿದೇ ನಾ ನೋಡಿದೆ ನೋಡಿದೇ ನಾ ನೋಡಿದೆ ankita gurujagannatha vittala vyasaraja stutih

✍️ಕೌತಾಳಂ ಶ್ರೀ ಗುರುಜಗನ್ನಾಥ ದಾಸರ ರಚನೆ.


ನೋಡಿದೇ ನಾ ನೋಡಿದೆ || ಪ ||


 ನೋಡಿದೇ ನಾ ನೋಡಿದೆರಾಯರ|

ನೋಡಿದೆನೊ ಶುಭಕಾಯರಾ|

ಮಾಡಿದೆ ಶಿರಬಾಗಿ ನಮನವ

ಬೇಡಿದರ್ಥವ ಕೊಡುವ ವಡೆಯರ || ಅ.ಪ ||


ಭಿದುರ ಮಯವಾದ ವೇದಿ ಕಾಗ್ರದಿ|

ಚದುರ ದಿಕ್ಕಿಲಿ ಶೋಭಿಸುವ ಶುಭ|

ತ್ರಿದಿಶ ವರ ಮುಖ ದಿವಿಜ ರೈವರು|

ಮುದದಿ ಇರುತಿಹ ರಿವರ ಮಧ್ಯದಿ

ಪದುಮನಾಭನ ಚತುರ ರೂಪವ|

ಹೃದಯ ಮಂದಿರದಲ್ಲಿ ಭಜಿಸುವ|

ಪದುಮನಾಭನ ಪ್ರೀತಿ ಪಾತ್ರರ

ಸದ ಮಲಾ ಗುರು ವ್ಯಾಸರಾಯರ || 1 ||


ಶ್ರೀನಿವಾಸನು ಶಿರಸಿ ನೊಳಗಿಹ|

ಆನ ನಾಗ್ರದಿ ಬಾದರಾಯಣ|

ಜ್ಞಾನಮಯ ಶಿರಿ ಹಂಸ ಅಚ್ಯುತ|

ಮೌನಿ ಕಪಿಲಾನಂತ ಭಾರ್ಗವ|

ಮಾನನಿಧಿ ಹಯಗ್ರೀವ ಹಂಸನು|

ದಾನವಾಂತಕ ರಾಮಚಂದ್ರ ಸದಾನುರಾಗದಿ ತೆನೆಗಳಲ್ಲಿ|

ಭಾನುನಂದದಿ ಪೊಳೆವ ಬಗೆಯನು || 2 ||


ಮಧ್ಯ ಭಾಗದಿ ಕೃಷ್ಣ ದೇವನು|

ಇದ್ದು ಇವರನು ಸೇವೆ ಮಾಳ್ಪರ|

ಶುದ್ಧ ಮಾಡವರರ್ಥ ಸರ್ವದ|

ಶಿದ್ಧಿಮಾಡಿ ಇವರನತಿ ಪ್ರ

ಶಿದ್ಧ ಮಾಡಿವರಲ್ಲಿ| ಪ್ರತ್ಯಕ್ಷ

ಸಿದ್ಧ ನಾಗಿರುತಿಹನು ನಮ್ಮ ಗುರು|

ಮಧ್ವ ಗುರುಜಗನ್ನಾಥವಿಠಲನ|

ಮಧ್ಯ ಹೃದಯದಿ ಭಜಿಪ ಗುರುಗಳ||

***