ರಾಗ : ಯದುಕುಲ ಕಾಂಬೋಧಿ ತಾಳ : ಝ೦ಪೆ
ಯಾತರವ ನಾನಲ್ಲವೋ
ಹರಿ ಬರಿದೆ ।
ಖ್ಯಾತಿಯ
ತಂದಿತ್ತೆಯಾ ।। ಪಲ್ಲವಿ ।।
ಮಾತುಗಳ ನಾಲ್ಕಡಿ
ಸೇರಿದ ಸಭೆಯೊಳಗೆ ।
ಪ್ರೀತಿ ಬಡಿಸುವೆನೋ ನರರ ।
ರೀತಿಯಲಿ ನೀತಿಯಲಿ
ಶ್ರುತಿಸ್ಮೃತಿಗಳ ಪಠಿಸಿ ।
ನಾಥ ನಿನ್ನನು
ಪೋಷಿಸಿದೆನೇ ।। ಚರಣ ।।
ಜಪ ಮಣಿಗಳನು ತಿರುಹಿ
ಬೆರಳಿಂದ ಲೋಗರನು ।
ಕಪಟಗೊಳಿಸುವನಲ್ಲದೆ ।
ತಪವ ಮಾಡಿದೆನೆ ಮನದಿ
ಭಕುತಿಯಿಂ ನಿನ್ನಯ ।
ಕೃಪೆಯು ಉದಿಸುವ
ತೆರದಲಿ ।। ಚರಣ ।।
ದಾಸ ವೇಷವ ಧರಿಸಿದೆನು
ಬಿಡದೆ ಕನಕದಾ ।
ವಾಸನೆಯಿಂದಲ್ಲದೆ ।
ವಾಸುದೇವಾವಿಠಲಾ
ಶರಣ ತಾನೆಂದು ।
ಲೇಶರಿಯೇನು ಕರುಣಿಸೋ
ದೇವ ।। ಚರಣ ।।
***