Showing posts with label ಇದೇ ನಿತ್ಯ ನಮಸ್ಕಾರ ನೋಡಿ mahipati. Show all posts
Showing posts with label ಇದೇ ನಿತ್ಯ ನಮಸ್ಕಾರ ನೋಡಿ mahipati. Show all posts

Wednesday, 11 December 2019

ಇದೇ ನಿತ್ಯ ನಮಸ್ಕಾರ ನೋಡಿ ankita mahipati

by ಮಹಿಪತಿದಾಸರು
ರಾಗ - ದಾನೀ ದೀಪಚಂದಿ ತಾಳ

ಇದೇ ನಿತ್ಯ ನಮಸ್ಕಾರ ನೋಡಿ
ಗುರುಚರಣಕೆ ಮನಗೂಡಿ ||ಪ||

ಬಿಡದಿಹುದೇ ಸತ್ಸಂಗ
ನೋಡಿ ಇದುವೇ ಶಿರಸಾಷ್ಟಾಂಗ
ಕಡದ್ಹೋಯಿತು ಭವದುಸ್ಸಂಗ
ದೃಢಮಾಡಿ ಮನ ಅಂತರಂಗ ||೧||

ನಮ್ರತೆಯಲಿಹುದೇ ನಮನ
ಪ್ರೇಮಭಾವವೆಂಬುದು ಪ್ರದಕ್ಷಿಣ
ನೇಮದಿಂದ ನಡೆದವನು ದಿನಾ
ಬ್ರಹ್ಮಾನಂದದೋರುವ ಸಾಧನ ||೨||

ಗುರ್ವಿನಂಘ್ರಿಗೆ ಎಡೆಮಾಡಿ
ಅರ್ವಿನೊಳಾದ ಮಹಿಪತಿ ನೋಡಿ
ಗರ್ವ ಪುಣ್ಯೆಂಬುದ ಈಡ್ಯಾಡಿ
ಸರ್ವ ಪಾಪ ಹೋಯಿತು ಓಡಿ ||೩||
*******

ಇದೇ ನಿತ್ಯನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ 
ಧ್ರುವ ಬಿಡದಿಹುದೇ ಸತ್ಸಂಗಾ ನೋಡಿ ಇದೇವೆ ಶಿರಸಾಷ್ಟಾಂಗಾ ಕಡದ್ಹೋಯಿತು ಭವದುಸ್ಸಂಗಾ ದೃಢಮಾಡಿ ಅಂತರಂಗಾ1 
ನಮೃತಲಿಹುದೆ ನಮನಾ ನೇಮದಿಂದ ನಡೆದವರು ದಿನಾ ಬ್ರಹ್ಮಾನಂದದೋರುವ ಸಾಧನ 2 
ಗುರ್ವಿನಂಘ್ರಿಗೆ ಎಡೆಮಾಡಿ ಅರ್ವಿನೊಳಾದ ಮಹಿಪತಿ ನೋಡಿ ಗರ್ವ ಪುಣ್ಯೆಂಬುದು ಈಡ್ಯಾಡಿ ಸರ್ವಪಾಪ ಹೋಯಿತು ನೋಡಿ 3
***