Showing posts with label ನಂಬಿದೆ ನಿನ್ನ ನೀರಜಪಾದ ಇಂಬಿನಲ್ಲಿಟ್ಟು vijaya vittala. Show all posts
Showing posts with label ನಂಬಿದೆ ನಿನ್ನ ನೀರಜಪಾದ ಇಂಬಿನಲ್ಲಿಟ್ಟು vijaya vittala. Show all posts

Thursday, 17 October 2019

ನಂಬಿದೆ ನಿನ್ನ ನೀರಜಪಾದ ಇಂಬಿನಲ್ಲಿಟ್ಟು ankita vijaya vittala

ನಂಬಿದೆ ನಿನ್ನ ನೀರಜಪಾದ |
ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಪ

ಅಂಬರೀಷನ ಶಾಪ ಹಿಂಗಿಸಿ ಕಳೆದ ದ- |
ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಅ.ಪ

ಉಗ್ರನ್ನ ಖಳವಂಚಿಸಿ ತನ್ನ ಕ- |
ರಾಗ್ರವಾ ಶಿರದಲ್ಲಿ ಇಡಬರಲು ||
ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ |
ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು1

ಕಾಲದೂತರು ಅಜಾಮಿಳನೆಳೆಯಲು |
ನಾಲಿಗೆಯಿಂದ ನಾರಗÀನೆನ್ನಲು ||
ಆಲಸ್ಯ ಮಾಡದೆ ನಿನ್ನ ದೂತರನಟ್ಟಿ |
ಓಲಗ ವೈಕುಂಠವಿತ್ತ ಭಾಂದವನೆಂದು 2

ಭೂತಳದೊಳು ನಿನ್ನನು ಪೋಲುವ |
ದಾತರ ನಾನೆಲ್ಲಿ ಕಾಣೆ ಶ್ವೇತವಾಹನ ||
ದಾತ |
ವಿಜಯವಿಠ್ಠಲನಹುದೆಂದು ದೃಢವಾಗಿ 3
***

pallavi

nambida ninna nIraja pAda imbinalliTTu salahO prasAda

anupallavi

ambarIshana shApa ingishi kaLeda dayAgambudhi nIendu hambaliside hariye

caraNam 1

ugranna kaLa oncisi tanna karAgrava shiradalli IDa baralu
agrEsha kAyandu avanIga moreyiDe shIghradindali bandu kAida karuNiyendu

caraNam 2

kAla dUtaru ajAMiLaneLeyalu nAligeyinda nAraganennalu
Alasya mADade ninna dUtaranaTTi Olaga vaikuNThavitta bAndhavanendu

caraNam 3

bhUtaladoLu ninnanu pOluva dAtara nAnelli kANE shvEta vAhana
mastakavanu uLuhida dAta vjayaviThalanahudendu drDhavAgi
***