..
ಕೃಷ್ಣ ಕಲಿಯ ಕಾಯ್ದ ಕರುಣಿ ಜಿಷ್ಣುಸಖನೆ ಕೃಷ್ಣನೆ ಪ.
ಕೃಷ್ಣ ಪೊರೆಯೊ ಎನ್ನ ವಿಷಯತೃಷ್ಣೆಯಿಂ ಸಾಯಲೆ ದಮ್ಮಯ್ಯ ಅ.ಪ.
ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ ನೀನುಕುಂದು ಕುಜನದೂರ ನಿನ್ನ ಕಂದನೆಂದು ಸಲಹೊ ತಂದೆ1
ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ-ಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆಭ್ರಮಿತನಾದೆ ಬಲುಪ್ರೇಮವ ತಪ್ಪಿಸಿ ಸುರಕ್ತಾನು ಹೆ ದೈವ ಎನ್ನಆ ಮಹಾಭಯವ ನಿವಾರಿಸೊ2
ಸುಖದುಃಖ ಜೀವನಕ್ಕೆ ಕಕ್ಕು ಬಕ್ಕು ಭಯದ ಬೊಸರಕ್ಕೆ ಬಿಡದೆ ಬಿಡದೆ ನಿನ್ನ ಲೆಕ್ಕ ಮಾಡಲಿಯ್ಯದೊಚಿಕ್ಕತನದಿ ಸಿಕ್ಕಿ ದುರ್ವಿಷಯದಿ ನೊಂದೆ ಮೇ-ಯಿಕ್ಕದಂತೆ ಹಯವದನ ದಕ್ಕಿಸೆನ್ನ ಅನುದಿನ 3
***