ರಾಗ ಸೌರಾಷ್ಟ್ರ ಅಟತಾಳ
ನಿನ್ನದು ನಿನಗೆ ಬಾರಿಸಿ ಕೊಟ್ಟೇನು ತಾರೇ ದಂಡಿಗೆಯ || ||ಪ||
ಗಂಗಾಳ ಕಣ್ಣಂತೆ ಅಂಗಳ ಹೊರಗಂತೆ
ಕಂಗಳಿಲ್ಲದವ ಕುರುಡನಂತೆ ತಾರೇ ದಂಡಿಗೆಯ ||
ಮಂಡಿಗೆಯ ಸವಿಯಂತೆ ಸಂಡಿಗೆ ಖಾರಂತೆ
ಗಂಡುಳ್ಳಳು ಮುತ್ತೈದಂತೆ ತಾರೇ ದಂಡಿಗೆಯ ||
ಅತ್ತಕಾಯಂತೆ ಬತ್ತಿದ ಬಾವಿಯಂತೆ
ಅತ್ತೆಯ ಮಗಳು ತನಗಂತೆ ತಾರೇ ದಂಡಿಗೆಯ ||
ತಗ್ಗಾದ ಹುರಿಯಂತೆ ಮಗ್ಗಾದ ಗುಣಿಯಂತೆ
ಬಗ್ಗಿದರೆರಡು ಹೊರಗಂತೆ ತಾರೇ ದಂಡಿಗೆಯ ||
ಹಳ್ಳದ ಹರಿಯಂತೆ ಗುಳ್ಳದ ನೀರಂತೆ
ಪುರಂದರ ವಿಠಲ ಹೇಳಿದನಂತೆ ತಾರೇ ದಂಡಿಗೆಯ ||
***
ನಿನ್ನದು ನಿನಗೆ ಬಾರಿಸಿ ಕೊಟ್ಟೇನು ತಾರೇ ದಂಡಿಗೆಯ || ||ಪ||
ಗಂಗಾಳ ಕಣ್ಣಂತೆ ಅಂಗಳ ಹೊರಗಂತೆ
ಕಂಗಳಿಲ್ಲದವ ಕುರುಡನಂತೆ ತಾರೇ ದಂಡಿಗೆಯ ||
ಮಂಡಿಗೆಯ ಸವಿಯಂತೆ ಸಂಡಿಗೆ ಖಾರಂತೆ
ಗಂಡುಳ್ಳಳು ಮುತ್ತೈದಂತೆ ತಾರೇ ದಂಡಿಗೆಯ ||
ಅತ್ತಕಾಯಂತೆ ಬತ್ತಿದ ಬಾವಿಯಂತೆ
ಅತ್ತೆಯ ಮಗಳು ತನಗಂತೆ ತಾರೇ ದಂಡಿಗೆಯ ||
ತಗ್ಗಾದ ಹುರಿಯಂತೆ ಮಗ್ಗಾದ ಗುಣಿಯಂತೆ
ಬಗ್ಗಿದರೆರಡು ಹೊರಗಂತೆ ತಾರೇ ದಂಡಿಗೆಯ ||
ಹಳ್ಳದ ಹರಿಯಂತೆ ಗುಳ್ಳದ ನೀರಂತೆ
ಪುರಂದರ ವಿಠಲ ಹೇಳಿದನಂತೆ ತಾರೇ ದಂಡಿಗೆಯ ||
***
pallavi
ninnadu ninage bArisi koTTEnu tArE daNDigeya
caraNam 1
gangALa kaNNante angaLa horagante kangaLilladava kuruDanante tArE daNDigeya
caraNam 2
maNDigeya saviyante saNDige khArante kaNDuLLaLu muttaidante tArE daNDigeya
caraNam 3
attakAyante battida bhAviyante atteya magaLu tanagante tArE daNDigeya
caraNam 4
taggAda hariyante maggAda guNiyante baggidheraDu horagante tArE daNDigeya
caraNam 5
haLLada hariyate guLLada nIrante purandara viTTala hELIdanante tArE daNDigeya
***