Showing posts with label ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ramesha. Show all posts
Showing posts with label ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ramesha. Show all posts

Monday, 2 August 2021

ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ankita ramesha

ಅರ್ಥಿಲೊಂದು ಹೇಳುವೆನಮ್ಮಅಲ್ಲಿವಾರ್ತೆಯಚಿತ್ತಗೊಟ್ಟು ಕೇಳ ತಾಯಿಅವರ ಕೀರ್ತಿಯ ಪ.


ಹೋಗಿ ನಾನು ನಾಗವೇಣಿಯರ ಬಾಗಿಲು ಹೊಕ್ಕೆನುಸಾಗರಶಯನ ಮಂಚವೇರಲು ಧಕ್ಕನೆ ನಿಂತೆನು 1

ಮರ್ಯಾದಿಲೆ ಹರಿಯ ಮನೆ ಬಾಗಿಲು ಮರೆಯಲಿ ನಿಂತೆನುಸಿರಿಯರಸು ಸತಿಯರಿಂದ ಬೆರೆದು ಕುಳಿತೆ2

ಫುಲ್ಲನಾಭನು ಮಲ್ಲಿಗೆ ಮಂಚದೊಳಿರುತಿರೆವಲ್ಲಭೆಯರಿಬ್ಬರು ಗಂಧಪೂಸಿ ಅಲ್ಲೆ ಕುಳಿತಿಹರು3

ವನಜನಾಭಗೆ ಪುನಗು ಜಾಜಿ ವನಿತೆಯರು ಹಚ್ಚುತಿಹರುಪುನಗು Pಸ್ತ್ತೂರಿ ಬೊಟ್ಟು ಮಾನಿನಿಯರು ಇಡುತಿಹರು4

ನೀರ ಜಾಕ್ಷಗೆ ಥೋರ ಮಲ್ಲಿಗೆಹಾರ ಹಾಕುತ ಚಾರು ಅಂಗದ ಮ್ಯಾಲೆ ಬುಕ್ಕಿಟ್ಟು ಸೂರಿ ಸುಖಿಸುತ 5

ಕೃಷ್ಣರಾಯಗೆ ಕೊಟ್ಟು ಅಡಿಕೆ ತುಷ್ಟರಾಗಲಿಪಟ್ಟದ ರಾಣಿಯರಿಬ್ಬರು ಇಟ್ಟರು ತೊಡೆಮೇಲೆ 6

ಬಟ್ಟನೆ ವೀಳ್ಯ ರುಕ್ಮಿಣಿದೇವಿ ಕೊಟ್ಟೆನೆನುತಲಿಥಟ್ಟನೆ ಕೃಷ್ಣನವದನದಲ್ಲಿ ಇಟ್ಟಾಳು ಭಾವೆ ತಾ 7

ಭರದಿ ಕೋಪಿಸಿ ರುಕ್ಮಿಣಿದೇವಿ ತೆರೆದುಕಣ್ಣುತಾಹಿರಿಯಳೇನು ಮೊದಲು ಕೊಟ್ಟೆ ವೀಳ್ಯವೆನ್ನುತಲೆ 8

ಭೂಪÀ ರಾಮೇಶ ರುಕ್ಮಿಣಿದೇವಿಯ ತಾಪವ ಕಾಣುತಅಪಾರ ಕೋಪವ ಅರಘಳಿಗೆಯಲಿ ಇಳಿಸುವೆನೆಂದು ತಾ9

****