Showing posts with label ಕೃತಾಂತಗತಿ ಕೃತಾಂತಗತಿ ದಿತಿಜರಿಗೆದುರಾಂತ ನೀ ನಮಗೆ ಗುಣವಂತ ಹನುಮಂತ hayavadana. Show all posts
Showing posts with label ಕೃತಾಂತಗತಿ ಕೃತಾಂತಗತಿ ದಿತಿಜರಿಗೆದುರಾಂತ ನೀ ನಮಗೆ ಗುಣವಂತ ಹನುಮಂತ hayavadana. Show all posts

Wednesday, 1 September 2021

ಕೃತಾಂತಗತಿ ಕೃತಾಂತಗತಿ ದಿತಿಜರಿಗೆದುರಾಂತ ನೀ ನಮಗೆ ಗುಣವಂತ ಹನುಮಂತ ankita hayavadana

 ..

ಕೃತಾಂತಗತಿ [ಕೃತಾಂತಗತಿ ದಿತಿಜರಿಗೆದುರಾಂತ] ನೀ ನಮಗೆ ಗುಣವಂತ ಹನುಮಂತ ಪ


ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ 1


ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ 2


ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ 3

***