Showing posts with label ಮಾನಸ ಪೂಜೆಯನು ಮಾಡು ಧ್ಯಾನ ಪೂರ್ವದಿಂದ vijaya vittala. Show all posts
Showing posts with label ಮಾನಸ ಪೂಜೆಯನು ಮಾಡು ಧ್ಯಾನ ಪೂರ್ವದಿಂದ vijaya vittala. Show all posts

Wednesday, 16 October 2019

ಮಾನಸ ಪೂಜೆಯನು ಮಾಡು ಧ್ಯಾನ ಪೂರ್ವದಿಂದ ankita vijaya vittala

ವಿಜಯದಾಸ

ಮಾನಸ ಪೂಜೆ

ಮಾನಸ ಪೂಜೆಯನು ಮಾಡು |
ಧ್ಯಾನ ಪೂರ್ವದಿಂದ ಕುಳಿತು | ಪ |

ಜ್ಞಾನ ಭಕುತಿಯವಿಡಿದು ಲಕುಮಿ |
ಪ್ರಾಣನಾಥನ ಪ್ರೇರಣೆಯಿಂದ |ಅ.ಪ|

ಕಾಮ ಕ್ರೋಧವ ಹಳಿದು ವಿಷದ
ಸ್ತೋಮಗಳನು ತೊರೆದು ರಜೋ
ತಾಮಸದ ಬುದ್ಧಿ ಬಿಟ್ಟು
ನೇಮನಿತ್ಯ ತೀರಿಸಿ
ಶ್ರೀಮದಾನಂದತೀರ್ಥರ
ಕೋಮಲಾಂಘ್ರಿ ಕಮಲದಲಿ
ಈ ಮನಸ್ಸು ಇಟ್ಟು
ನಿಷ್ಕಾಮದಲಿ ಬಗೆಯ ತಿಳಿದು ! ೧ |

ಹೃದಯ ಪದುಮದೊಳಗೆ ಹರಿಯ
ಪದುಮ ಪದಗಳಿಟ್ಟು ದೇಹ
ಕದಲದಂತೆ ಇದ್ದು ಜ್ಞಾನ
ಉದಿತವಾದ ದೃಷ್ಟಿಯ ||
ಹದುಳದಿಂದ ತಿರಿವಿ ಅಂತ ರವೆಲ್ಲವನು ನೋಡಿ |
ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ | 2 |

ನೀಲ ರತುನದಂತೆ ಹೊಳೆವ
ಪಾಲಸಾಗರ ತನುಜೆ ಅಲ
ಮೇಲು ಮಂಗಲರಮಣನಾದ ಮೇಲುಗಿರಿಯ ತಿಮ್ಮನ |
ಲಾಲಣಿಂದ ತುತಿಸಿ ತವಕ
ಬೀಳದಲೆ ಪೂಜೆ ವಿಧಾ ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ | 3 |

ವೇದ ಮಂತ್ರಗಳನು ಪೇಳಿ. ಆದಿಯಲ್ಲಿ ಪೀಠಪೂಜೆ- |
ಯಾದ ತರುವಾಯ ವಿನೋದದಿಂದಲಾವರಣ ||
ಆದರಣೆಯಾದ ಬಳಿಕ
ಮಾಧವಂಗೆ ಸಕಲ ಭೂಷ- |
ಣಾದಿಗಳನು ರಚಿಸಿ ಪುಣ್ಯ ಹಾದಿಯನು ತಪ್ಪದೆ | 4 |

ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿ ಮಾಡದೆ |
ನಾಶರಹಿತನಾದ ಹರಿಯ
ಆ ಶಿರಸಾವಿಡಿದು ಪಾದ
ಲೇಸಿನಿಂದ ಭಜನೆಗೈದು. ವಾಸವಾಗುವ ಪದದಲ್ಲಿ |
ಶ್ರೀಶ ವಿಜಯವಿಠ್ಠಲರನ್ನ ದಾಸದಾಸರ ದಾಸನೆಂದು | 5 |
***

pallavi

mAnasa pUjeyanu mADu dhyAna pUrvakadinda kuLitu

anupallavi

jnAna bhakutiyaviDidu lakumi prANanAthana prEraneyinda

caraNam 1

kAma krOdhava haridu vishAdavembO stOmagaLennu toredu rajO modalAda tAmasada
buddhi biTTu nEma nitya tIrisi koNDu shrimadAnanda tIrthara kOmalAnghriyalli I manasu iTTu

caraNam 2

hradaya padumadoLage hariya paduma padagaLiTTu dEha kadaladanta iddu jnAna uditavAda
draSTiya haduLadinda tiLidu antaravellavanu nODi kadava teredu koTTa modadi drDhava sampAdsisi

caraNam 3

nIla ratunadenta hoLeva pAlasAgara tanuja mElu mangaLa ramaNanAda mElu giriya timmana
lAliyinda tutisi tavaka bILadale pUje vidhA sAlugaLanu tiLidu vishAla buddhi yukutiyinda

caraNam 4

vEda mantragaLanu pELi Adiyelli pITHa pUjeyAda taruvAya vinOdadinda lAvaraNa
AdaraNeyAda baLika mAdhavange sakala bhUSaNADigaLannu racisi puNyahAdiyannu tappade

caraNam 5

dOSarAshige dvESanAgi I sharIrava ghAsi mADade nAsharahitanAda hariya AshIra sAviDidu pAda
lEsininda bhajanagaidu vAsavAgu padadalli shrIsha vijayaviThalaranna dAsa dAsara dAsanendu
***

ಮಾನಸ ಪೂಜೆಯನು ಮಾಡು |
ಧ್ಯಾನ ಪೂರ್ವದಿಂದ ಕುಳಿತು ಪ

e್ಞÁನ ಭಕುತಿಯ ವಿಡಿದು ಲಕುಮಿ |
ಪ್ರಾಣನಾಥನ ಪ್ರೇರಣೆಯಿಂದ ಅ.ಪ

ಕಾಮ ಕ್ರೋಧವ ಹಳಿದು ವಿಷಾದವೆಂಬೋ |
ಸ್ತೋಮಗಳನು ತೊರೆದು ರಜೋ ಮೊದಲಾದ ||
ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು |
ಈ ಮನಸ್ಸು ಇಟ್ಟು 1

ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು |
ದೇಹ ಕದಲದಂತೆ ಇದ್ದು e್ಞÁನ ಉದಿತವಾದ ದೃಷ್ಟಿಯ ||
ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ |
ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2

ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ |
ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ ||
ತವಕ ಬೀಳದಲೆ ಪೂಜೆ ವಿಧಾ |
ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3

ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- |
ಯಾದ ತರುವಾಯ ವಿನೋದದಿಂದಲಾವರಣ ||
ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- |
ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4

ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ |
ಪಾದ ||
ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ |
ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
***