Showing posts with label ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು shree krishna. Show all posts
Showing posts with label ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು shree krishna. Show all posts

Wednesday, 1 September 2021

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ankita shree krishna

..

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ


ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ


ಪೊರೆಯೊ ಪರದೈವವೆಂದು ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು 1


ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು 2


ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ 3


ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು 4


ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು 5

***