..
kruti by shantibai dasaru ಶಾಂತಿಬಾಯಿ ದಾಸರು
ಶಿವಸ್ತುತಿ
ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ
ತನುಮನಕಾಧಾರನಾದ ಘನಪರಾನಂದಾರ್ತ
ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ 1
ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ
ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ 2
ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ
ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ 3
ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ
ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ 4
***