Showing posts with label ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ramesha. Show all posts
Showing posts with label ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ramesha. Show all posts

Wednesday 4 August 2021

ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ankita ramesha

 ..

ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ.


ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1

ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2

ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3

ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4

ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5

ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6

ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7

ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8

ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9

****