ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ದೇವ ದೇವ ದೇವ ದೇವಾದಿದೇವ| ಶ್ರೀ ದೇವನೇ ದೇವಾ|ಸಲಹೆನ್ನ ಸದಾ ಪ
ವಸುಧಿಯ ತನುಭವ ತನುಗಿರಿ ಕುಲಿ|ಶಾ| ಮರರಿಗಡಿಗಡಿಗೆ ನೀ ಸಲಹುವೆ ಕರುಣದಿ| ಬಿಸರುಹ ಲೋಚನ ದೇವ ದೇವಾ| ಸುರತರು ದೇವದೇವ1
ನಗವರಧರ ಮೃಗಕುಲದಧಿಪತಿ| ವೈರಿಯ ಕುಲವರ ವರದನೇ ಕೇಶವಾ| ಉಡಗಣ ಪತಿಯನ ಪಡೆದನ ತನುಜೆಯ| ರಮಣನೆ ಮಹಿಪತಿ ನಂದನ ಜೀವನಾ| ಪೊಡವಿ ಮನೋಹರ ದೇವ ದೇವಾ 2
****