..
kruti by ವರದೇಶ ವಿಠಲರು varadesha vittala dasaru
ಭಾರತೀರÀಮಣನೆ ಸಾರಿದೆನು ಚರಣ
ತೋರು ಮನ್ಮನದಲಿ ಭೂರಿಸುಕÀರುಣ ಪ
ನಾರಾಯಣಾಂಕದಿ ಕುಳಿತಿಹ ಶೂರಾ
ಸೂರಿಸ್ತೋಮತೇಜೊರಂಜಿಪುದಾರಾ
ಮಾರಮಣನಾಜ್ಞಾದಿಂ ಬ್ರಹ್ಮಾಂಡಧಾರಾ
ಧಾರಕಾನಂದ ವಿಠಲನ್ನಚಾರಾ 1
ದುರುಳರಕ್ಕಸತತಿಯ ದ್ವಿರದ ವಿದಾರ
ಹರಿರಘುವರನಪಾದ ಶರಧಿಜ ಚಕೋರ
ಹರಮುಖ್ಯ ಸುರಸರಸಿರುಹಕೆ ದಿನಕರ
ವರದೇಶವಿಠ್ಠಲನ ಸ್ಮರಿಪÀ ಸಮೀರ 2
ಕುರುಕುಲ ಸಂಜಾತ ದ್ರುಪದಜಾನಾಥ
ದುರಿಯೋಧನನ ಊರುತರಿದ ನಿರ್ಭೀತ
ಪರಮ ಭಗವದ್ಭಕÀ್ತವೃಂದ ಸುಪ್ರೀತ
ವರದೇಂದ್ರ ವಿಠ್ಠಲನ ಪ್ರೀಯ ಸುತನೀತ 3
ಅದ್ವೈತ ಮತತಿಮಿರ ಧ್ವಂಸÀನ ಧಿರ
ಶುದ್ಧವೈಷ್ಣವ ಮತಸ್ಥಾಪನಾಪಾರ
ಸದ್ವಾಕ್ಯದಿಂದಲಿ ಹರಿಪಾರವಾರ
ಮಧÀ್ವಸುಂದರ ವಿಠ್ಠಲನ ಸುಕುಮಾರ 4
ವರದೇಶವಿಠ್ಠಲ ವರದೇಂದ್ರ ವಿಠಲ ಸುಂ -
ದರ ವಿಠಲ ಆನಂದ ವಿಠ್ಠಲನ್ನ
ಪರಿಪರಿ ವಿಧದಲ್ಲಿ ಕರುಣವ ಪಡೆದಿಹ
ಗುರುಜಗನ್ನಾಥ ವಿಠ್ಠಲನ ನಿಜದೂತ 5
***