..
kruti by rukmangadaru
ಕಾಲ ಕರ್ಮ ಕಾಟಿಗಾಗಿ | ಮೇಲುಗಿರಿರಾಯ ನಿನ್ನ ||ಕಾಲಿಗೆನ್ನ ಶಿರವನಿಟ್ಟೆ | ಸಾಲ ಬೇಡುವವನಂತೆ ಪ
ದಡವ ಸೇರಿಸೆನ್ನ ದೈನ್ಯ | ನುಡುಗಿ ತಡೆಯದೆ ||ಬಡವನೆಂದುದಾಸೀನವ | ಮಾಡಿ ನೋಡದೆ 1
ಹಲವು ದೇವಂಗಳಿಗೆ ನಾನು | ಹಲುಬಿ ಬಳಲಿದೆನಯ್ಯ ಸ್ವಾಮಿ || ಫಲವ ಗಾಣದೆನೊಂದು ಬೆಂದು | ತಿಳಿಯದಾದೆ ತಪ್ಪು ಎಂದು 2
ಪುಂಡಲೀಕ ವರದನಾಗಿ | ಪಾಂಡುರಂಗನೆನಿಸಿಕೊಂಡು ||ಗಂಡದೈವ ವೆಂಕಟೇಶ | ಭಂಡು ಮಾಡದೆ ರುಕ್ಮನಾ 3
***