ankita ಭೀಮೇಶವಿಠಲ
ರಾಗ: [ನವರೋಜó] ತಾಳ: [ಆದಿ]
ರಾಘವೇಂದ್ರರಚರಣವನು ತುತಿಪೆ ನಾ
ರಾಘವೇಂದ್ರರನ್ನು ಜಾಗುಮಾಡದೆಲೆ
ಬಾಗಿ ನಮಿಸಿದವ ಭೋಗಿಯಾದುದನು ತಿಳಿದು ಪ
ಪ್ರತಿವರುಷದಿ ಬಂದತಿಹರುಷದಿ ನಿನ್ನ
ರಥವನೋಡಿ ಪಾಡಿದವಗೆ ಸುತರ ನೀಡಿ ಸಲಹುತಿಹ 1
ದರುಶನಮಾತ್ರದಿ ದುರಿತಗಳೆಲ್ಲವು ಹರವು
ಹರಿಯ ಕೃಪಾಸಾಗರಪಡೆದು ಮೆರೆದಿರುವ 2
ಕುಷ್ಟಾದಿ ವ್ಯಾಧಿಗಳಟ್ಟುತ ಭೀಮೇಶ
ವಿಠಲ ಕೀರುತಿಕೊಟ್ಟು ಒಲಿದಿರುವದರಿತು 3
***