..
kruti by ಭೀಮಾಶಂಕರರು ದಾಸರು bheemashankara
ಆರತಿಗಾರತಿ ಬೆಳಗಿತು ತನ್ನಿಂದ ತಾನೆ |ಮಹಗುರುವಿಗೆ | ತನ್ನಿ | ಅರವೂ ಮರವೂ ಎರಡಾದರುವಿಗೆ ಬೆಳಗುವ ತಾನೇ ಪ
ಸಹಸ್ರ ಸೂರ್ಯರ ಪ್ರಭೆಗಳ ಕಲೆತು ಕೋಟಿ ಶಶಿಕಿರಣಾ ಮಹತೇಜ ಫಾಕಿಸಿ ಮುಟ್ಟಿತು ಅಡಗಿತು ಗಗನಾ 1
ಎತ್ತೆತ್ತ ನೋಡಿದರತ್ತ ಸ್ವಪ್ರಕಾಶವೇ |ನಿತ್ಯ ನಿರಂಜನ ನಿಃಶಬ್ದ ಮೂಲಕ ಬೆಳಗುವ ತಾನೇ 2
ಪರಮ ಪ್ರಕಾಶ ಪರತರ ಪರಂಜ್ಯೋತಿ ಗುರುನಾಥಾ |ತೆರವಿಲ್ಲದಾರುತಿ ಭೀಮಾಶಂಕರ ಬೆಳಗುತ 3
***