Showing posts with label ಬುದ್ಧಿವಂತನಲ್ಲ ರಂಗನು ಮುದ್ದು ಮಾಡಿ purandara vittala. Show all posts
Showing posts with label ಬುದ್ಧಿವಂತನಲ್ಲ ರಂಗನು ಮುದ್ದು ಮಾಡಿ purandara vittala. Show all posts

Thursday, 5 December 2019

ಬುದ್ಧಿವಂತನಲ್ಲ ರಂಗನು ಮುದ್ದು ಮಾಡಿ purandara vittala

ರಾಗ ಪಂತುವರಾಳಿ ಅಟತಾಳ 

ಬುದ್ಧಿವಂತನಲ್ಲ ರಂಗನು ||ಪ||
ಮುದ್ದು ಮಾಡಿ ಸಲಹಿದೆ ಗೋಪಿ ||ಅ.ಪ||

ಆವು ಕಾಯ ಹೋಗಿ ಯಮುನಾ ತೀರದಲಿ ಮ-
ಡುವ ಧುಮುಕಿ ಕಾಳಿಂಗನ ಪೆಡೆ ತುಳಿದನೆ ||

ಹೆಡೆಯ ತುಳಿದು ಹಾವಿನ ಮೇಲೆ ಮಲಗಿ
ಕಡುನಿದ್ರೆಗೈವನು ಸಾಧು ಬಾಲಕನೆ ||

ಹದ್ದನೇರಿಕೊಂಡು ಜಗವೆಲ್ಲ ತಿರುಗಿ
ಗೆದ್ದು ಬಾಹೋ ಬುದ್ಧಿ ಇವಗೇನೆ ||

ಮಾರಬಂದ ಹೆಣ್ಣು ಹೆಡಿಗೆ ಸೂರೆಗೊಂಬ
ವಾರುಣಾದಿಂದಲಿ ಬೈಸಿಕೊಂಬನೆ ||

ಗಂಡನುಳ್ಳ ಹೆಂಡರ ಕೊಂಡು ಒಯ್ದು ಅವ
ಭಂಡು ಮಾಡುವನೀ ಪುರಂದರವಿಠಲ ||
***

pallavi

buddhivantanalla ranganu

anupallavi

muddu mADi magana salahide gOpi

caraNam 1

Avu kAya pOgi yamunA tIradali maDuva tumuki kALingana beDe tuLidane

caraNam 2

heDeya tuLidu hAvina mEle malagi kaDu nidre kaivanu sAdhu bAlakane

caraNam 3

haddanEri koNDu jagavella tirugi geddu bAhO buddhi ivagake

caraNam 4

mAra banda haNNU heDige sUrekomba vAraNAdindali bhayasikombane

caraNam 5

kaNDanuLLa heNDira koNDu oidu avara bhaNDu mAduvanI purandara viTTala
***