Showing posts with label ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ ಶ್ರೀಹರಿ ಕರುಣಿಸದೆ ಒಂದೂ ಆಗದು neleyadikeshava. Show all posts
Showing posts with label ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ ಶ್ರೀಹರಿ ಕರುಣಿಸದೆ ಒಂದೂ ಆಗದು neleyadikeshava. Show all posts

Wednesday, 1 September 2021

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ ಶ್ರೀಹರಿ ಕರುಣಿಸದೆ ಒಂದೂ ಆಗದು ankita neleyadikeshava

 ..

ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ


ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1


ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ


ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3

***