Showing posts with label ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ purandara vittala DURITAVETTANADO DURGATIYU ELLIHUDO. Show all posts
Showing posts with label ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ purandara vittala DURITAVETTANADO DURGATIYU ELLIHUDO. Show all posts

Thursday, 2 December 2021

ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ purandara vittala DURITAVETTANADO DURGATIYU ELLIHUDO

ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?
ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.

ಸ್ನಾನವೇತಕೆ ಸಂಧ್ಯಾ ಜಪತಪವೇತಕೆಮೌನವೇತಕೆ ಮಾಸವ್ರತವೇತಕೆ ||ಮಾನಸದಲಿ ವಿಷ್ಣುಧ್ಯಾನವ ಮಾಡುವಜ್ಞÕನವಂತರ ಸಂಗಸುಖದೊಳಿಪ್ಪವರಿಗೆ 1

ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆಗೋತ್ರಧರ್ಮದ ಪುಣ್ಯ ಫಲವೇತಕೆ ? ||ಸೂತ್ರದಿ ಜಗವ ಮೋಹಿಸುವ ಮುರಾರಿಯಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2

ಅಂಗದಂಡನೆ ಏಕೆ ಆತ್ಮಗಾಸಿಯು ಏಕೆತಿಂಗಳ ಚಾಂದ್ರಾಯಣವೇತಕೆ ? ||ಮಂಗಳ ಮಹಿಮ ಶ್ರೀ ಪುರಂದರವಿಠಲನಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3
***