Showing posts with label ನುಹುಡಿಯ ಹೊರಳ್ಯೇನು ಬಡಕೊಂಡ prasannavenkata. Show all posts
Showing posts with label ನುಹುಡಿಯ ಹೊರಳ್ಯೇನು ಬಡಕೊಂಡ prasannavenkata. Show all posts

Wednesday 13 November 2019

ನುಹುಡಿಯ ಹೊರಳ್ಯೇನು ಬಡಕೊಂಡ ankita prasannavenkata

by ಪ್ರಸನ್ನವೆಂಕಟದಾಸರು
ನುಹುಡಿಯ ಹೊರಳ್ಯೇನು ಬಡಕೊಂಡರೇಕಡಲಶಯನನೊಳು ದೃಢ ಭಕ್ತಿ ಇರದೆ ಪ.

ಐದು ಪಾವಕನೊಳು ಮೈ ದಹಿಸಿದರೇನುಒಯ್ದು ಶ್ವಾಸವ ನೆತ್ತಿಲಿಟ್ಟರೇನುತೊಯ್ದುಟ್ಟರಿವೆ ತುದಿಗಾಲಲಿ ನಿಂತೇನುಮೈದುನಸಖನಂಘ್ರಿ ಪೂಜಿಸದನಕ 1

ತೊಪ್ಪಲ ಮೆದ್ದಗ ತಪ್ಪಲ ಸೇರೇನುಉಪ್ಪವಾಸನಿಲವ ನುಂಗಲೇಸುಒಪ್ಪುವ ಇಳೆಯ ಸುತ್ತಾಡಿ ದಣಿದರೇನುದರ್ಪಕನಯ್ಯನ ಒಲುಮಿಲ್ಲದನಕ 2

ಮಧ್ವಸರೋವರ ಮೀಯದ ಜನುಮೇನುಮುದ್ದುಕೃಷ್ಣನ ನೋಡದಕ್ಷಿಯೇನುಮಧ್ವೇಶ ಪ್ರಸನ್ವೆಂಕಟೇಶನೊಪ್ಪಿರದವನಿದ್ದೇನು ಇಲ್ಲದೇನೀಧರೆಗೆ 3
*******