Showing posts with label ನೂತನಕೆ ನೂತನ ಬಲು kamalanabha vittala. Show all posts
Showing posts with label ನೂತನಕೆ ನೂತನ ಬಲು kamalanabha vittala. Show all posts

Friday, 27 December 2019

ನೂತನಕೆ ನೂತನ ಬಲು ankita kamalanabha vittala

by ನಿಡಗುರುಕಿ ಜೀವೂಬಾಯಿ
ನೂತನಕೆ ನೂತನ ಬಲು ನೂತನಶೇಷಗಿರಿವಾಸ ನಿನ್ನ ಮಹಿಮೆ ನೂತನವು ಪ

ಮಾಡದನೆ ಮಾಡಿಸುವಿ ನೋಡದನೆ ನೋಡಿಸುವಿಬೇಡದಿದ್ದುದನೆಲ್ಲ ಕಾಡಿ ಬೇಡಿಸುವಿನಾಡೊಳಗೆ ನಿನ್ನ ಪೋಲುವರುಂಟೆ ಸರ್ವೇಶಮೂಡಲಗಿರಿವಾಸ ನಿನ್ನ ಮಹಿಮೆ ನೂತನವು 1

ಅಣುಮೇರು ಮಾಡಿಸುವಿ ಘನತೃಣವ ಮಾಡಿಸುವಿಘನಕೃಪಾಂಬುಧಿ ನಿನ್ನ ಮಹಿಮೆ ನೂತನವೊಅಣಕವಾಡುವರಲ್ಲಿ ಕುಣಿಸಿ ಮರೆಸುತಲಿರುವಿಫಣಿಶಾಯಿ ನಿನ್ನ ಮಹಿಮೆ ಪ್ರತಿಕ್ಷಣಕೆ ನೂತನವು 2

ಕಮಲಸಂಭವ ಪಿತನೆ ಕಮಲಜಾತೆಯ ರಮಣವಿಮಲ ಮುನಿಗಳ ಹೃದಯಕಮಲಶೋಭಿತನೆಕಮಲದಳನೇತ್ರನೆ ಕಮಲನಾಭ ವಿಠ್ಠಲಕಮನೀಯರೂಪನಿನ್ನ ಮಹಿಮೆ ನೂತನವೊ3
*******