Showing posts with label ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ bheemesha krishna. Show all posts
Showing posts with label ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ bheemesha krishna. Show all posts

Wednesday, 1 September 2021

ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ankita bheemesha krishna

 ..

ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ

ಸುಖಿಸೋಳೊ ಲಕ್ಷ್ಮೀಲೋಲ ಪಾಡಿ

ತೂಗುವಳೊ ಮೋಹದಲಿ ಯಶೋದ

ಯೋಗಿ ಜನರು ಕೊಂಡಾಡಲ್ವಿನೋದ 1


ದುರ್ಗೆರೂಪ ಪ್ರಳೆ(ಳಯ?) ಜಲಧಿ ಭೂದೇವಿ

ಪ್ರಜ್ವಲಿಸುವ ಆಲದೆಲೆಯು ತಾನಾಗಿ

ನಿದ್ರೆಹಸಿವು ಬಿಟ್ಟು ನಿರುತದಿ ಆತನ-

ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2


ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ-

ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ

ಕಟುತರದಲಿ ನಾಲ್ಕು ವೇದವ ತೋರುತ

ಪಟುತರದಲಿ ಯೋಗನಿದ್ರೆ ಮಾಡಿದನು 3


ಹದಿನಾಲ್ಕು ಲೋಕ ತನ್ನುದರದಲ್ಲಿಡುವ

ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ

ಅಜಭವಸುರರೆಲ್ಲ ಭಜನೆಯ ಗೈವರು

ಮುದದಿ ಶಯನವ ಮಾಡೊ ಮಧು ಮುರಾಂತಕನೆ 4


ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು

ಬಿಡದೆ ನಾರಿಯರೆಲ್ಲ ಪಾಡಿ ತೂಗುವರು

ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು

ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5

***