..
ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿ
ಸುಖಿಸೋಳೊ ಲಕ್ಷ್ಮೀಲೋಲ ಪಾಡಿ
ತೂಗುವಳೊ ಮೋಹದಲಿ ಯಶೋದ
ಯೋಗಿ ಜನರು ಕೊಂಡಾಡಲ್ವಿನೋದ 1
ದುರ್ಗೆರೂಪ ಪ್ರಳೆ(ಳಯ?) ಜಲಧಿ ಭೂದೇವಿ
ಪ್ರಜ್ವಲಿಸುವ ಆಲದೆಲೆಯು ತಾನಾಗಿ
ನಿದ್ರೆಹಸಿವು ಬಿಟ್ಟು ನಿರುತದಿ ಆತನ-
ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2
ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ-
ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ
ಕಟುತರದಲಿ ನಾಲ್ಕು ವೇದವ ತೋರುತ
ಪಟುತರದಲಿ ಯೋಗನಿದ್ರೆ ಮಾಡಿದನು 3
ಹದಿನಾಲ್ಕು ಲೋಕ ತನ್ನುದರದಲ್ಲಿಡುವ
ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ
ಅಜಭವಸುರರೆಲ್ಲ ಭಜನೆಯ ಗೈವರು
ಮುದದಿ ಶಯನವ ಮಾಡೊ ಮಧು ಮುರಾಂತಕನೆ 4
ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು
ಬಿಡದೆ ನಾರಿಯರೆಲ್ಲ ಪಾಡಿ ತೂಗುವರು
ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು
ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
***
No comments:
Post a Comment