..
ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ
ಭೂಸುರ ಸೇವಿತ | ಭಾಸುರ ಮಹಿಮ ಉ
ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ
ಪದುಮಸಂಭವ ಕುಲದಿ ಜನಿಸುತ
ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ
ವಿಧ ವಿಧದಿ ಬೋಧಿಸಿ
ಮದಡರುದ್ಧರಿಸಿದ | ಸದಮಲ ಹೃದಯ 1
ನತಜನ ಸುರತರುವೆನಿನ್ನನು
ತುತಿಸಿಲೆನಗೊಶವೆ |
ಸತತದಿ ಸೇವಿಸಿ | ಯತಿ ವರದೇಂದ್ರರ
ಹಿತದಲಿ ಪಡೆದ ಪ್ರತಿ ಪ್ರಭಾಕರ 2
ತರತಮ ಭೇದವನು | ಶ್ರೀವರ
ಹರಿದಿನ ಮಹಿಮೆಯನು
ಸರಳಕನ್ನಡದಿ ವಿರಚಿಸಿ ಕವನವ
ನೊರೆದು ಸಜ್ಜನರ ಪೊರೆವ ಮಹಾತ್ಮಾ 3
ವಾತಜಾತ ಸುಮತ ಸಾಗರ
ಶೀತಕಿರಣ ನಿರುತ
ಪೋತನೊಳೀತರ | ಯಾತಕೆ ನಿರ್ದಯ
ನೀತವಕದಿ ಸಂಪ್ರೀತಿಯಿಂದೊಲಿದು 4
ಪ್ರೇಮದಿ ಪಿಡಿಕೈಯ | ಮಾನವಿ
ಧಾಮರ ಸುವಿಧೇನು
ಶಾಮಸುಂದರೆನ | ನಾಮನೆನೆವ ಸುಖ
ಯಾಮ ಯಾಮಕೀಪಾಮರಗೀಯುತ 5
***