Wednesday, 1 September 2021

ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ankita shyamasundara pranesha dasa stutih

 ..

ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ


ಭೂಸುರ ಸೇವಿತ | ಭಾಸುರ ಮಹಿಮ ಉ

ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ


ಪದುಮಸಂಭವ ಕುಲದಿ ಜನಿಸುತ

ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ

ವಿಧ ವಿಧದಿ ಬೋಧಿಸಿ

ಮದಡರುದ್ಧರಿಸಿದ | ಸದಮಲ ಹೃದಯ 1


ನತಜನ ಸುರತರುವೆನಿನ್ನನು

ತುತಿಸಿಲೆನಗೊಶವೆ |

ಸತತದಿ ಸೇವಿಸಿ | ಯತಿ ವರದೇಂದ್ರರ

ಹಿತದಲಿ ಪಡೆದ ಪ್ರತಿ ಪ್ರಭಾಕರ 2


ತರತಮ ಭೇದವನು | ಶ್ರೀವರ

ಹರಿದಿನ ಮಹಿಮೆಯನು

ಸರಳಕನ್ನಡದಿ ವಿರಚಿಸಿ ಕವನವ

ನೊರೆದು ಸಜ್ಜನರ ಪೊರೆವ ಮಹಾತ್ಮಾ 3


ವಾತಜಾತ ಸುಮತ ಸಾಗರ

ಶೀತಕಿರಣ ನಿರುತ

ಪೋತನೊಳೀತರ | ಯಾತಕೆ ನಿರ್ದಯ

ನೀತವಕದಿ ಸಂಪ್ರೀತಿಯಿಂದೊಲಿದು 4


ಪ್ರೇಮದಿ ಪಿಡಿಕೈಯ | ಮಾನವಿ

ಧಾಮರ ಸುವಿಧೇನು

ಶಾಮಸುಂದರೆನ | ನಾಮನೆನೆವ ಸುಖ

ಯಾಮ ಯಾಮಕೀಪಾಮರಗೀಯುತ 5

***


No comments:

Post a Comment