Showing posts with label ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು gurumahipati. Show all posts
Showing posts with label ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು gurumahipati. Show all posts

Wednesday 1 September 2021

ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು ತಮ್ಮವಗುಣ ಮರ್ತ್ಯಲಾಭಾ ಲಾಭಾ ಕರ್ತ ಮಾಡುವೆನೆಂದು ಪ 


ಕಣ್ಣು ಕಿವಿ ನಾಲಿಗಿನ್ನು ನಾಶಿಕಕೊಟ್ಟು ಸನ್ನುತ ಹರಿಕಥೆ ಕೇಳು ಯನ್ನಸ್ತುತಿ ಸುನಿರ್ಮಾಲ್ಲ್ಯುನ್ನತ ತುಳಸಿ ವಾಸನಾಘ್ರಾಣಿಸೆಂದು ಮುನ್ನೆಂದನಲ್ಲದೇ ಆನ್ಯದೈವ ನೋಡೆಂದನೇ ಪಿಶುನರ ಅನ್ಯಾಯವ ಕೇಳೆಂದನೇ ಉದರಕಾಗಿ ಮಾನವ ಹೊಗಳೆಂದನೇ ಭೋಗದ ತನ್ನಗೋಸುಗ ದ್ರವ್ಯ ಆಘ್ರಾಣಿಸೆಂದನೆ 1 

ಮಂಡಿತ ಸಿರಸದೋರ್ದಂಡ ಕರಚರಣ ಚಂಡ ಮನಗಳಿಂದಾ ಖಂಡ ನಮಿಸಿ ಸೇವೆ ಪುಂಡಲೀಕದ ಪರಿಗಂಡು ನೃತ್ಯಾದಿಯ ಬೋಧ ಮನನ ಪಂಡುಂಡ ಮಾಡೆಂದ ಮಂಡಿ ಬಿಗಿದರೆಂದನೇ ಜನರಿಗು ದ್ವಂದದಿ ಹೊಡಿಯಂದನೇ ಧನಿಕರ ಕಂಡು ಭ್ರಾಂತಿಗೆ ಬಿದ್ದು ಚಿಂತಿಸುಯಂದನೆ 2 

ನಿತ್ಯ ವರಿತು ಸತ್ಯಜ್ಞಾನೌಷದ ಉತ್ತಮ ರಸಾಯನ ಅತ್ತಿತ್ತಲಾಗದೇ ಕೊಂಡು ಇತ್ತ ಭವರೋಗ ವಿಪತ್ತದ ಕಳೆಯೆಂದ ಮತ್ತ ಮಹಿಪತಿ ಸುತ ಹೃತ್ತಾಪಹಾರಿ ಕು ಚಿತ್ತ ನೀನಾಗೆಂದನೇ ಸತ್ಸಂಗ ನಿತ್ಯ ಮಾಡಿರೆಂದನೇ ಬರಿದೆನೀ ಮೃತ್ಯು ದೇವತೆ ಬಾಯ ತುತ್ತಾಗುಯಂದನೆ 3

***