Showing posts with label ಕಾಯೋ ಕೃಷ್ಣನೆ ಕಾಯೊ ಕೃಷ್ಣನೆ ಕಾಯೊ krishnavittala. Show all posts
Showing posts with label ಕಾಯೋ ಕೃಷ್ಣನೆ ಕಾಯೊ ಕೃಷ್ಣನೆ ಕಾಯೊ krishnavittala. Show all posts

Monday, 2 August 2021

ಕಾಯೋ ಕೃಷ್ಣನೆ ಕಾಯೊ ಕೃಷ್ಣನೆ ಕಾಯೊ ankita krishnavittala

ಕಾಯೊ ಕೃಷ್ಣನೆ ಕಾಯೊ ಕೃಷ್ಣನೆ ಕಾಯೊ

ಕೃಷ್ಣನೆ ಎಮ್ಮನು ಪ


ಮಾಯ ರಮಣನೆ ಕಾಯ ಒಪ್ಪಿಸಿ ಜೀಯ

ನಂಬಿದೆ ನಿನ್ನನು ಅ.ಪ


ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು

ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1

ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ

ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2

ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ

ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3

ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ

ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4

ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ

ಆಶೆ ಬಿಡಿಸಿ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5

ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ

ಸಾನುರಾಗದಿ e್ಞÁನದಂಬಕ ದಾನ ಮಾಡೊ ದಾನಿಯೆ6

ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ

ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7

ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ

ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8

ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ

ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9

ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ

ವಾರಿಮಂದಿರ ಸೂರಿ ಶೇಖರ ಮೇರೆಗಾಣದ ಮಹಿಮನೆ 10

ಸರ್ವರಕ್ಷಕ ಸರ್ವಭಕ್ಷಕ ಸರ್ವಸಾಕ್ಷಿಯೆ ಸರ್ವನೆ

ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11

ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ

ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12

ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ

ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13

ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ

ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14

ಶಕಟ ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ

ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15

ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ

ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16

ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ

ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17

ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ

ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18

ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ

ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19

ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ

ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20

ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ

ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21

ಏಕನಾಯಕ ನಾಕಮಂದಿರ ಶ್ರೀ ಕಳತ್ರ ಅನೀಕನೆ

ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22

ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ

ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23

ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ

ಮಾನ್ಯಮಾನದ e್ಞÁನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24

ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ

ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ

ಕೃಷ್ಣವಿಠಲನೆ ಬಿಂಬನೆ 25

****