Showing posts with label ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ vijaya vittala madhwacharya stutih. Show all posts
Showing posts with label ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ vijaya vittala madhwacharya stutih. Show all posts

Thursday, 26 December 2019

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ ankita vijaya vittala madhwacharya stutih

ವಿಜಯದಾಸ
ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ |
ಆನಂದ ಜನನದಲಿ ಜನನಗಳ ನೀಗಿರೊ ಪ

ಮಲಗಿ ಏಳುವಾಗ ಮಾತುಗಳನಾಡುವಾಗ |
ಇಳಿಯ ಮೇಲಡಿಯಿಟ್ಟು ತಿರುಗುವಾಗ ||
ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ |
ಮಲಿನ ಸಂಕರನಳಿದಮಲಬೋಧನ ನೆನೆಯಿರೊ 1

ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ |
ಪಾವಕಾವನಿ ಸುರರ ಉಣಿಸುವಾಗ ||
ಕೋವಿದರ ಸಂಗಡ ಸಂತೋಷಬಡುವಾಗ |
ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ2

ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ |
ಪ್ರತಿ ದಿವಸÀ ಷಟ್ಕರ್ಮ ಮಾಡುವಾಗ ||
ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ |ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ3
********