Showing posts with label ಪರಶುರಾಮದೇವಾ ನೀನೆ ದುರಿತ gururama vittala. Show all posts
Showing posts with label ಪರಶುರಾಮದೇವಾ ನೀನೆ ದುರಿತ gururama vittala. Show all posts

Tuesday, 25 May 2021

ಪರಶುರಾಮದೇವಾ ನೀನೆ ದುರಿತ ankita gururama vittala


ರಾಗ - : ತಾಳ -


ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ ll ಪ ll


ದರುಶನ ಮಾತ್ರದಿ ಭವರೋಗವಪರಿ

ಹರಿಸಿ ಕೈಪಿಡಿವ ಕರುಣಾನಿಧಿಯೆ ll ಅ ಪ ll


ಜಮದಗ್ನಿಕುಮಾರಾ ನಿನ್ನನು

ಕ್ರಮದಿ ಭಜಿಸುವವರಾ

ಸಮವಿರಹಿತ ಉತ್ತಮ ಪದವಿಯೊಳಿ

ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ ll 1 ll


ನಿನ್ನ ಮಹಿಮೆಯನ್ನು ಅರಿಯದ

ಕುನ್ನಿಪಾಮರನು ನಾನು

ಬನ್ನಬಡುವೆನು ಭವಾರ್ಣವದೊಳುಯೆನ್ನ

ಜನ್ಮಜನ್ಮದಘವನ್ನು ಬಿಡಿಸಿ ಕಾಯೊ ll 2 ll


ಗರಳಪುರದದೊರಿಯೆ ನಿನ್ನ ಸಂ

ಸ್ಮರಣೆ ಕೊಡೊ ಹರಿಯೆ

ಸರಸಿಜಭವ ಶಿವ ಮುಖ ಸುರವಂದಿತ

ಪರಮ ಪುರುಷ ಶ್ರೀ ಗುರುರಾಮವಿಟ್ಠಲ ll 3 ll

***