Showing posts with label ಪಾಲಿಸೋ ಗಂಗಾಧರ ಪಾಲಿಸೋ gopalakrishna vittala. Show all posts
Showing posts with label ಪಾಲಿಸೋ ಗಂಗಾಧರ ಪಾಲಿಸೋ gopalakrishna vittala. Show all posts

Friday 27 December 2019

ಪಾಲಿಸೋ ಗಂಗಾಧರ ಪಾಲಿಸೋ ankita gopalakrishna vittala

ಪಾಲಿಸೋ ಗಂಗಾಧರ ಪಾಲಿಸೋ||pa||
.
ಪಾಲಿಸೊ ಗಂಗಾಧರನೆ | ಮಧ್ಯ
ಫಾಲದಿ ನಯನ ಉಳ್ಳವನೆ | ಆಹ
ಶ್ರೀಲೋಲನ ಗುಣಜಾಲವ ಸ್ಮರಿಸುತ್ತ
ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ||a.pa||

ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು
ದುರ್ಮತಿಗಳನೆ ಮೋಹಿಸಿ | ಕು
ಧರ್ಮದ ಶಾಸ್ತ್ರವ ರಚಿಸಿ | ಅಂ
ಧತಮ್ಮಸಿಗವರ ಕಳಿಸಿ | ಆಹ
ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ
ಉಮೆಯೊಡನೆ ನಿತ್ಯ ರಮಿಸುತಲಿಪ್ಪನೆ||1||

ಕಂಜನಾಭನ ಮೊಮ್ಮಗನೆ | ಖಳರ
ಭಂಜಿಸುವಂಥ ಬಲಯುತನೆ | ಮನ
ರಂಜನ ರೂಪಾಕೃತನೆ | ಖಳ
ಗಂಜಿ ಹರಿಯಿಂದ ರಕ್ಷಿತನೆ | ಆಹ
ಅಂಜಿ ದೈತ್ಯರಿಗೆ ಅಮೃತ ಮಥಿಸುವಾಗ
ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ ||2||

ಕಪಿಲನದಿ ತೀರದಲ್ಲಿ | ಬಹು
ತಪಸಿಗಳಿಗೆ ಒಲಿಯುತಲಿ | ಭಕ್ತ
ರಪರಿಮಿತ ಬರುತಿಲ್ಲಿ | ನಿತ್ಯ
ಜಪಿಸುತ್ತ ನಿನ್ನ ಸ್ತೋತ್ರದಲಿ | ಆಹ
ಗುಪಿತದಿಂದ್ಹರಿ ಭಕ್ತರಪವರ್ಗದೊಡೆಯ ನಿನ್ನ
ಲ್ಲಿಪ್ಪನೆಂತೆಂದು ಜಪಿಸುತ್ತಲಿಪ್ಪರೊ||3|

ಗಂಗಾಧರನೆನಿಸಿದನೆ | ಅಂತ
ರಂಗದಿ ಹರಿಯ ತೋರುವನೆ | ಉಮೆ
ಕಂಗಳಿಗಾನಂದಪ್ರದನೆ | ನಿತ್ಯ
ರಂಗನಾಥನ ಪೂಜಿಸುವನೆ | ಆಹ
ಜಂಗಮ ಜೀವರ ಮನದಭಿಮಾನಿಯೆ
ಲಿಂಗರೂಪದಿ ಜನರ ಕಂಗಳರಂಜನೆ||4||

ಅಪಾರ ಮಹಿಮನ ಗುಣವ | ಬಹು
ರೂಪಗಳನೆ ನೋಡುತಿರುವ | ನಿತ್ಯ
ಶ್ರೀಪತಿ ನರಹರಿಯ ನೆನೆವ | ಮುಂದಿ
ನಾ ಪದವಿಗೆ ಶೇಷನಾಗ್ವ | ಆಹ
ಈ ಪರಿ ಮಹಿಮನೆ ನೀ ಪರಿ ಪರಿಯಿಂದ
ಗೋಪಾಲಕೃಷ್ಣವಿಠ್ಠಲನ ಧ್ಯಾನವ ನೀಡೊ||5||
*******