Showing posts with label ನರಹರಿ ತಾರಿಸೊ ಎನ್ನಾ ದುರಿತಾರಿ mahipati. Show all posts
Showing posts with label ನರಹರಿ ತಾರಿಸೊ ಎನ್ನಾ ದುರಿತಾರಿ mahipati. Show all posts

Wednesday, 22 December 2021

ನರಹರಿ ತಾರಿಸೊ ಎನ್ನಾ ದುರಿತಾರಿ ankita mahipati

 ರಾಗ –  :  ತಾಳ –


ನರಹರಿ ತಾರಿಸೊ ಎನ್ನಾ ದುರಿತಾರಿ 

ಮುಕ್ತಿ ದಾರಿ ಸಾರಿ ದೋರಿ ದಯಬೀರಿ ll ಪ ll


ಕಮಲಾಯ ತಾಂಬಕ ಕರುಣ ಜಲನಿಧಿಸಿರಿ

ಕಮನೀಯ ಲಾವಣ್ಯ ರೂಪ ಶಂಖಾರಿ

ವಿಮಲಗದಾಂಭುಜಧಾರೀ

ಸುಮನ ಸಾಧುಜನ ಹೃದಯ ವಿಹಾರಿ ll 1 ll


ಎಲೆ ದೇವ ದೇವ ಎಂದ್ಯ ಜೀವ ಕಾವ ಮುರ ಅರಿ

ಚೆಲುವ ಕಸ್ತೂರಿ ಶ್ರೀಹರೀ 

ವಲಿದು ಮಹಿಪತಿ ಜನಪರೋಪರಿಯಲಿ

ಸಲಹುತಿಹ ಮಾಮಾನೋ ಹಾರಿ ll 2 ll


ಕಾಖಂಡಕಿ ಶ್ರೀ ಕೃಷ್ಣದಾಸರ ಕೃತಿ

***