ಯೆಂದಿಗೆ ಬರುತೀಯೆ ಸುಂದರ ಭಾರತಿ
ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ.
ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ
ಕುಂದುಗಳೆಣಿಸಾದಿರು ಆನಂದ ತೋರು ಅ.ಪ.
ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು
ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ
ತ್ರಿವಿಧ ಜೀವರೊಳಗೆ ನಿಂತು
ತ್ರೀವಿಧ ಪ್ರೇರಣೆ ಮಾಡುವಿ
ದೇನಿ ನಿನ್ನಾ ಮಹಿಮೆಗೆ
ನಮೋ ಎಂಬೆ ಪುತ್ಥಳಿಯಾ ಬೊಂಬೆ 1
ಮಂದರೋದ್ಧರನ ಪಾದಸೇವಕಳೇ
ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ
ವರಗಳ ನೀಡೆ ದಯಮಾಡಿ ನೋಡೆ
ತವಪಾದವ ಕೊಡೆ
ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2
ಗರುಡ, ಶೇಷ ರುದ್ರಾದಿಗಳೊಡೆಯಳೇ
ನೀನು ನಿನ್ನಡಿಗಳಿಗೆರಗುವೆ
ನಾನು ತಡಮಾಡ ಬ್ಯಾಡಮ್ಮಾ
ನಡೆದು ಬಾರಮ್ಮ
ಭವ ಮಡುವಿನೊಳಗಿರುವೆನು
ಗರುಡವಾಹನ ನಮ್ಮ ಕಾಳಿಮರ್ಧನಕೃಷ್ಣ
ತೋರಿಸೋ ದಯಪಾಲಿಸೋ 3
****