Showing posts with label ಮರೆಯದಿರೆಲೆ ಮನವಿಲ್ಲಿ ಯಮಪುರಿಗೆ purandara vittala. Show all posts
Showing posts with label ಮರೆಯದಿರೆಲೆ ಮನವಿಲ್ಲಿ ಯಮಪುರಿಗೆ purandara vittala. Show all posts

Friday, 6 December 2019

ಮರೆಯದಿರೆಲೆ ಮನವಿಲ್ಲಿ ಯಮಪುರಿಗೆ purandara vittala

ಪುರಂದರದಾಸರು
ರಾಗ ಪೂರ್ವಿ ಅಟತಾಳ 

ಮರೆಯದಿರೆಲೆ ಮನವಿಲ್ಲಿ, ಯಮ
ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||ಪ||

ಪರ ನಾರಿಯರ ಸಂಗವಿಲ್ಲಿ, ಉಕ್ಕು
ಎರದ ಸತಿಯರ ತಕ್ಕೈಸುವರಲ್ಲಿ
ಗುರು ಹರಿಯರ ನಿಂದೆಯಿಲ್ಲಿ, ಬಾಯೋ-
ಳರೆದು ಸೀಸವ ಕಾಸಿ ಹೊಯಿಸುವರಲ್ಲಿ ||

ಉಂಡ ಮನೆಯ ಕೊಂಬುದಿಲ್ಲಿ, ಎದೆ
ಗುಂಡಿಗೆಯನು ಸೀಳಿ ಕೊಲುತಿಹರಲ್ಲಿ
ಗಂಡನ ದಣಿಸುವುದಿಲ್ಲಿ, ಯಮ
ಕುಂಡದೊಳಗೆ ಹಾಕಿ ಕುದಿಸುವರಲ್ಲಿ ||

ಚಾಡಿಗಳ್ಹೇಳುವುದಿಲ್ಲಿ, ನುಡಿ-
ದಾಡುವ ನಾಲಿಗೆ ಕೀಳುವರಲ್ಲಿ
ಬೇಡಿದರಿಗೆ ಧರ್ಮಕ್ಕಿಲ್ಲಿ ,ಇದ್ದು
ನೀಡದಿರಲು ನರಕಕೆ ನೂಕ್ವರಲ್ಲಿ ||

ಪುಸಿ ಠಕ್ಕು ಠವಳಿಗಳಿಲ್ಲಿ, ಕಟ್ಟಿ
ಎಸೆದು ಕೊಲ್ಲುವರೊ ನಿನ್ನವರು ಕೇಳಲ್ಲಿ
ಅಶತ ಪ್ರಭೇದಗಳಿಲ್ಲಿ ಮಾಡೆ, ಬಿಸಿಯ
ಕೆಂಡವ ತಂದು ತಿನಿಸುವರಲ್ಲಿ ||

ಸಿರಿಮದದೊಳಗಿಹುದಿಲ್ಲಿ, ಸೊಕ್ಕು
ಮುರಿದು ನಿನ್ನ ಹಲ್ಲ ಕಳಚುವರಲ್ಲಿ
ಪುರಂದರವಿಠಲನ ಇಲ್ಲಿ, ಬೆರೆಯೆ
ಸ್ಥಿರವಾದ ಮುಕ್ತಿ ಪಡಕೊಂಬುವರಲ್ಲಿ ||
***

pallavi

mareyadirale manavilli yamapurige oidu bAdhisuttiharalli

caraNam 1

para nAriyara sangavilli ukku erada satiyara takkaisuvaralli
guru hariyara nindeyilli bAyOLaredu sIsava kAsi hoyisuvaralli

caraNam 2

uNDa maneya kombudilli ede guNDigeyanu sILi kolutiharalli
gaNDana daNIsuvudilli yama kuNDadoLage hAki kudisuvaralli

caraNam 3

cADigaL-hELuvudilli nuDidADuva nAlige kILuvaralli
bEDidavarige dharmakkilli iddu nIDadiralu narakake nUkvaralli

caraNam 4

pusi Dakku DavuLigaLilli kaTTi esedu kolluvaro ninnavaru kELalli
ashata prabhEdagaLilli mADe bisiya keNDava tandu tinisuvaralli

caraNam 5

sirimadadoLagihudilli sokku muridu ninna halla kaLacuvaralli
purandara viTTalana illi bereya sthiravAda mukti paDa kombuvaralli
***

ಮರೆಯದಿರೆಲೆ ಮನವಿಲ್ಲಿ 
ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.

ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1

ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2

ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3

ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4

ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
**********