ರೂಪಾ ಮಧುಸೂದನ್ ಜೋಶಿ - ankita kaivalya swarupa vittala
ಗೋಪಾಲ ದಾಸ stutih
ದಿಟವಾದ ವಿಠಲನ ದಾಸರು ಭಾಗಣ್ಣರು
ಚಿಟಿಗೆ ತಾಳ ತಂಬೂರಿ ಗೆಜ್ಜೆ ಧರಿಸಿದರು ll ಪ ll
ಶಂಕರಸುತನಂಶರು ದಧಿಶಿಲೆಯಲಿ ಜನಿತರು
ಡೊಂಕನು ಜಗದ ತಿದ್ದುವ ಟೊಂಕಕಟ್ಟಿದರು
ಮಂಕು ಮನುಜರ ಶಂಕೆಯ ನಳಿದರು
ಅಂಕೆ ಇಲ್ಲದೆ ಜ್ಯೋತಿಷ್ಯ ನುಡಿದರು ll೧ll
ವಿಜಯದಾಸರ ಕರುಣೆಪಡೆದನಿಜದ ಶಿಷ್ಯರು
ಅಜನಯ್ಯನ ಭಜನೆ ನಿರುತ ಮಾಡಿದರು
ಋಜುಪುಂಗವನ ಋಜುಮನದಿ ಜಪಿಸಿದರು
ಸುಜನ ಗೋಪಾಲವಿಠಲ ಅಂಕಿತರು ಇವರll೨ll
ದೇವ ಧನ್ವಂತರಿಯ ಒಲಿಸಿಕೊಂಡವರು
ಭಾವದಿ ಉತ್ತನೂರಲಿ ನೆಲೆ ನಿಂತರು
ಅವಗಡೆಯ ತಪ್ಪಿಸಿ ಆಯುಷ್ಯ ಇತ್ತರು
ಕೈವಲ್ಯ ಸ್ವರೂಪ ವಿಠಲನಾ ದಾಸರು ll೩ll
✍️ರೂಪಾ ಮಧುಸೂದನ್ ಜೋಶಿ
***