ರಾಮದಾಸರಕೃತಿ
ಡೌಲಿನ ಡೌಲ್ಯಾಕೆ ಮಾಡ್ತಿ
ಕಾಲತೀರದ ಮೇಲೇನೆಂದು ಹೇಳ್ತಿ..ಪ
ಹೊಯ್ಮಾಲಿ ತನದ್ಹೊಲೆ ಕೆಲಸ ಮಾಡಿಕೂತಿ
ಸೈಮಾಡಿ ಬರಕೊಟ್ಟದೆಲ್ಲ ಮರೆತಿ..ಅ.ಪ
ಕಾಯವೆಂಬ ಹೊಲ ಕೌಲಿಗೆ ಹಿಡಿದಿ
ಮಾಯಾ ಮರವೆಯೆಂಬ ಮುಳ್ಳು ಬೆಳೆಸಿದಿ
ಹೇಯ ವಿಷಯವೆಂಬ ಸೆದೆಯ ಕೆಡವಿದಿ
ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ
ಕಾವಲಾದೆಲೆ ಮೂಳಿ ನಿನ್ನ ಎಡಬಲದಿ
ವಾಯಿದೆ ಸಮೀಪ ಬಂತು ಮುಂದೇನು ಹಾದಿ...1
ಕ್ರೋಧ ಎಂದೆಂಬ ಅಲಬು ಕಿತ್ತದೆ
ಭೇದ ಎಂದೆಂಬುವ ಜೇಕು ತೋಡದೆ
ವಾದವೆಂಬ ಬೋರೆ ಜಡ್ಡು ಕಡಿಯದೆ
ಖೇದಯೆಂದೆಂಬ ಕರಿಕೆದಡ್ಡ ನಳಿಯದೆ
ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ
ಕಾದುವ ಒಡಯನಿಗೀಡೇನು ಮಾಡ್ದೀ....2
ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ
ನಿತ್ಯ ನಿಮ೯ಲತೆಯೆಂಬ ಬಾಂದು ಒಡಿಸಿದಿ
ಸತ್ಯ ಸನ್ನಾಗೆ೯ಂಬ ಸೀಮೆಯ ಮುರಿದಿ
ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ
ನಿತ್ಯ ನಿಮ೯ಲ ನಮ್ಮ ಕತು೯ಶ್ರೀರಾಮನ
ಅತು೯ ಭಜಿಸಿದೆ ಯಮಗ್ಯೈಥ೯ ತುತ್ತಾದಿ...3
*******