..
ಬಲ್ಲೆ ಬಲ್ಲೆ ನಿಮ್ಮೆಲ್ಲರ ಗುಣವನು ನಾನು ಪಾರ್ಥಅವರ ಹೊಲ್ಲತನವ ಹೇಳಲು ಹೋಗುವಿ ಕೋಪಿಸಿ ನೀನು ಪ.
ದೊರೆ ಧರ್ಮನೆಂಬೊ ಬರಿ ಬಿಂಕದ ಹೆಸರ್ಯಾಕೊಬರಿಯ ಬಿಂಕದ ಹೆಸರ್ಯಾಕೊ ಜನ ಒರಲಿ ಒರಲಿಬಾಯಿ ತೆರೆಯಬಾರದು ದಯಸಾಕೊಹಿರಿಯನೆಂಬೊ ಹರಲಿಗೆ ತಕ್ಕವನಲ್ಲಇವ ಹರಲಿಗೆ ತಕ್ಕವನಿವನಲ್ಲನಿಮ್ಮ ಚರಿಯವ ಕೇಳುತ ಅಂಜರೊ ನರರೆಲ್ಲ 1
ಕುಂಭಿಪಾಕದೊಳು ಕುದಿಸುವ ಕೆಲವರು ಕೇಳೋ ಅದು ದಯವೆಂಬೊಮಾತಿದು ಮಂದಿಗೆ ಇರದು ಹೇಳೊಜಂಬವೆಂಬುದು ತುಂಬಿದೆ ಇವನಲ್ಲೆಷ್ಟು ಇದುನಮ್ಮ ಅಂಬುಜಾಕ್ಷನಲಿ ಅತಿ ಬ್ಯಾಗ ಬಾಹೋದು ಸಿಟ್ಟು 2
ಅನ್ಯ ಲೋಕದವರ ನ್ಯಾಯ ಕೇಳುವನಿವನಲ್ಲತನ್ನ ಬುದ್ದಿಯನು ತಾ ಕಳೆದನು ಧರ್ಮನು ಎಲ್ಲಮಾನ್ಯ ಮಾನ್ಯರೊಳು ಮಾನ ಭಂಗಿಸುವುದು ಇರುವುದು ಏನೊನಮ್ಮ ಚದುರ ರಾಮೇಶನು ಚನ್ನಾಗಿ ನಗುತಿಹನುತಾನು 3
***